ಬೆಂಗಳೂರು : ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮತ್ತು ಯುವಸಮೂಹ ಇವರಿಬ್ಬರು ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ RRR ನಗರದಲ್ಲಿ ಶ್ರೀಮತಿ ಕುಸುಮಾ ಹನುಮಂತರಾಯಪ್ಪ ಅವರು ಆಯೋಜಿಸಿದ್ದ ಮಹಿಳಾ ಸಂಕಲ್ಪ ಸಮಾವೇಶ, ಇಂದಿರಾ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಹೆಣ್ಣಿನ ಸಬಲೀಕರಣದ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀಮತಿ ಇಂದಿರಾ ಗಾಂಧಿಯವರು ಹೆಣ್ಣುಮಕ್ಕಳಿಗೆ ಮಾದರಿ. ಕಾಂಗ್ರೆಸ್ ಹಸ್ತ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಹಸ್ತ, ಸಂವಿಧಾನ ನೀಡಿದ ಹಸ್ತ, ತ್ರಿವರ್ಣ ಧ್ವಜವನ್ನು ನೀಡಿದ ಹಸ್ತ, ಭೂಮಿಯಿಲ್ಲದವರಿಗೆ ಭೂಮಿ ನೀಡಿ ಆರ್ಥಿಕ ಸಬಲತೆ ತಂದ ಹಸ್ತ ಎಂದರು.
ಶಿಹಾಬ್ ತಂಗಳ್ ಸೆಂಟರ್ ಫಾರ್ ಹ್ಯುಮಾನಿಟಿ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಕೋರಿ, ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳ ಜೀವನ ಸುಖಮಯವಾಗಿರಲಿ ಎಂದು ಡಿಕೆಶಿ ಹಾರೈಸಿದ್ದಾರೆ.
ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಆರ್ಆರ್ ನಗರದಲ್ಲಿ ಶ್ರೀಮತಿ ಕುಸುಮಾ ಹನುಮಂತರಾಯಪ್ಪ ಅವರು ಆಯೋಜಿಸಿದ್ದ ಮಹಿಳಾ ಸಂಕಲ್ಪ ಸಮಾವೇಶ, ಇಂದಿರಾ ನಮನ ಕಾರ್ಯಕ್ರಮದಲ್ಲಿ ಮಾತನಾಡಿದೆ. ಹೆಣ್ಣು ಸಂಸಾರದ ಕಣ್ಣು, ಹೆಣ್ಣು ಮತ್ತು ಯುವಸಮೂಹ ಇವರಿಬ್ಬರು ಮಾತ್ರ ದೇಶದಲ್ಲಿ ಬದಲಾವಣೆ ತರಲು ಸಾಧ್ಯ.
1/2 pic.twitter.com/dSHV44jQAf— DK Shivakumar (@DKShivakumar) October 30, 2022
ಅಪಘಾತದಲ್ಲಿ ಯುವಕನ ಬ್ರೈನ್ ಡೆಡ್ : ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು