ಕೋಲಾರ : ಜಿಲ್ಲೆಯ ಮಾಲೂರು ತಾಲ್ಲೂಕು ಮಾಸ್ತಿ ಗ್ರಾಮದ ಬಳಿ ಸ್ವತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಹೆಲಿಕಾಪ್ಟರ್ನಿಂದ ಇಳಿಯುವ ವೇಳೆ ಕಾಲು ಜಾರಿದ ಘಟನೆ ನಡೆಯಿತು. ಅವರು ಅಂಗರಕ್ಷಕರ ಕೈ ಹಿಡಿದುಕೊಂಡಿದ್ದರಿಂದ ಅನಾಹುತ ತಪ್ಪಿತು.
ಸಿದ್ದರಾಮೋತ್ಸವಕ್ಕೆ ಆಗಮಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದವರನ್ನು ಭೇಟಿಯಾಗಲು ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಲು ಜಾರಿ ಕುಸಿದು ಬಿದ್ದ ಘಟನೆ ನಿನ್ನೆ (ಗುರುವಾರ) ಬಾಗಲಕೋಟೆಯಲ್ಲಿ ನಡೆದಿತ್ತು.
ಆಗಸ್ಟ್ 2ರಂದು ಸಿದ್ದರಾಮೋತ್ಸವಕ್ಕೆ ಹೊರಟ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡಿದ್ದವರ ಯೋಗಕ್ಷೇಮ ವಿಚಾರಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಸಿದ್ದರಾಮಯ್ಯ ಅವರು ಡ್ರೈವರ್ ಪಕ್ಕದ ಡೋರ್ನಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸುವಾಗ ಕಾಲು ಜಾರಿ ಕುಸಿದು ಬಿದ್ದಿದ್ದರು. ಅವರು ಬೀಳುತ್ತಿದ್ದಂತೆ ಅಂಗರಕ್ಷಕರು ಅವರನ್ನು ಹಿಡಿದು ಎಬ್ಬಿಸಿ ಕಾರಲ್ಲಿ ಕೂರಿಸಿದ್ದರು.
ಮಾಸ್ತಿ ಗ್ರಾಮದಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ನೇತೃತ್ವದಲ್ಲಿ ಶಿವಕುಮಾರ್ ಬೃಹತ್ ರೋಡ್ ಷೋ ನಡೆಸಿದರು. ರೋಡ್ ಷೋ ವೇಳೆ ಅಭಿಮಾನಿಗಳು ಪಟಾಕಿ ಸಿಡಿಸಿ ಶಿವಕುಮಾರ್ ಅವರಿಗೆ ಪುಷ್ಪಾಭಿಷೇಕ ಮಾಡಿದರು. ಪಾದಯಾತ್ರೆ ಹಾಗೂ ರೋಡ್ ಷೋ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗಿಯಾದರು. ಈ ಸಂದರ್ಭದಲ್ಲಿ ಸಿಎಂ ಡಿಕೆಶಿ ಎಂಬ ಘೋಷಣೆ ಮೊಳಗಿದವು