ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ಅವರು ಹುಲಿಯಾದ್ರೇ, ಮಾಜಿ ಸಿಎಂ ಸಿದ್ಧರಾಮಯ್ಯ ( Farmer CM Siddaramaiah ) ಅವರು ತೊಡೆ ತಟ್ಟಿ ಬರೋ ಸಿಂಹ ಎಂಬುದಾಗಿ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಸಾಧು ಕೋಕಿಲ ( Comedian Sadhu Kokila ) ವರ್ಣಿಸಿದ್ದಾರೆ.
ಇಂದು ಸಿದ್ಧರಾಮೋತ್ಸವದಲ್ಲಿ ಭಾಗವಹಿಸಿದ ಬಗ್ಗೆ ಸುದ್ದಿಗಾರರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ನಾವು ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಕಾರ್ಯಕ್ರಮ ನಡೆಸಿಕೊಟ್ಟಿದ್ದೇ ಒಂದು ದೊಡ್ಡ ಸವಾಲಿನ ಕೆಲಸವಾಗಿತ್ತು ಎಂದಿದ್ದಾರೆ.
BIG NEWS: ಧಾರವಾಡದಲ್ಲಿ ಖೋಟಾನೋಟು ಚಲಾವಣೆ: ಬಿಜೆಪಿ ಮುಖಂಡ ಸೇರಿ ಮೂವರು ಅರೆಸ್ಟ್
ನಾವು ಕಾರ್ಯಕ್ರಮಕ್ಕೆ ತೆರಳಿ ಪ್ರೋಗ್ರಾಂ ಮಾಡಿದ್ದೇ ದೊಡ್ಡದು. ಕಾರ್ಯಕ್ರಮ ಮುಗಿಸಿ ಮನೆಗೆ ತಲುಪಿದ್ದೇ ರಾತ್ರಿ 12 ಗಂಟೆಗೆ ಆಗಿದೆ. ಕಾರ್ಯಕ್ರಮ ಇದ್ದದ್ದು ಬೆಳಿಗ್ಗೆ 10 ಗಂಟೆಗೆ. ನಾವು ದಾವಣಗೆರೆ ಬೆಳಿಗ್ಗೆ 8.30ಕ್ಕೆ ತಲುಪಿದ್ದು ಮಾತ್ರ, ಕಾರ್ ಬಿಟ್ಟು ಆಟೋದಲ್ಲಿ, ಓನ್ ವೇ ರಸ್ತೆಗಳಲ್ಲಿ ತೆರಳಿದ್ದು. ಕೊನೆಗೆ ಸ್ಟೇಜ್ ತಲುಪಿದ್ದು ಮಾತ್ರ 10.30ಕ್ಕೆ ಆಗಿದೆ ಎಂದರು.
ಸಿದ್ಧರಾಮಯ್ಯನವರ ಮೇಲಿನ ಅಭಿಮಾನ ಎಷ್ಟು ಎಂಬುದನ್ನು ಸಿದ್ಧರಾಮೋತ್ಸವ ಕಾರ್ಯಕ್ರಮದಲ್ಲಿ ನೋಡಿದೆ. ಮಳೆ ಬಂದಾಗ ನೆರೆ ಬರುತ್ತಲ್ಲ, ಅಷ್ಟು ಸಾಗರೋಪಾದಿಯಲ್ಲಿ ಜನರು ಸಿದ್ಧರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸೇರಿದ್ದರು ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್ ಅವರು ಹುಲಿ ಇದ್ದಂತೆ. ಹುಲಿ ಗ್ರೂಪ್ ನಲ್ಲಿ ಬರೋದಿಲ್ಲ. ಸಂದಿ-ಬಂದಿಯಲ್ಲಿ ಹೋಗೋದಿಲ್ಲ, ಅದು ಮೇನ್ ರೋಡ್ ನಲ್ಲಿಯೇ ನಡೆಯುತ್ತದೆ. ಸಂಬಂಧ ಪಟ್ಟಂತೆ ವೇದಿಕೆ ಬಳಿಸಿಕೊಂಡು ಹೇಳೋದು ಸಿನಿಮಾದವರ ಸ್ಟೈಲ್ ಎಂಬುದಾಗಿ ಹೇಳಿದರು. ಅಲ್ಲದೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಸಿಂಹವಿದ್ದಂತೆ ಎಂದು ಕೂಡ ಹಾಡಿ ಹೊಗಳಿದರು.