ದಾವಣಗೆರೆ: ನನ್ನ ಹಾಗೂ ಡಿಕೆ ಶಿವಕುಮಾರ್ ( DK Shivakumar ) ನಡುವೆ ಭಿನ್ನಾಭಿಪ್ರಾಯವಿದೆ. ಅವರಿಗೆ ಸಿದ್ಧರಾಮೋತ್ಸವಕ್ಕೆ ವಿರೋಧವಿದೆ ಎಂಬುದಾಗಿ ಹಲವರು ಹೇಳುತ್ತಿದ್ದರು. ಆದ್ರೇ ಇದೆಲ್ಲಾ ಸುಳ್ಳು. ನಾನು ಮತ್ತು ಡಿಕೆ ಶಿವಕುಮಾರ್ ಜೊತೆಯಾಗೇ ಇದ್ದೇವೆ. ಅವರು ನಾವು ಒಟ್ಟಾಗಿಯೇ ಮುಂದಿನ ಚುನಾವಣೆ ಎದುರಿಸಲಿದ್ದೇವೆ. ನಮ್ಮ ಉದ್ದೇಶ ಕೋಮುವಾದಿ ಬಿಜೆಪಿ ಈ ರಾಜ್ಯದಿಂದ ಓಡಿಸಿ, ಕಾಂಗ್ರೆಸ್ ಸರ್ಕಾರವನ್ನು ( Congress Government ) ಅಸ್ಥಿತ್ವಕ್ಕೆ ತರೋದೆ ಆಗಿದೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Siddaramaiah ) ಸ್ಪಷ್ಟ ಪಡಿಸಿದರು.
BREAKING NEWS: ದಾವಣಗೆರೆಯಲ್ಲಿ ‘ಎಐಸಿಸಿ ನಾಯಕ ರಾಹುಲ್ ಗಾಂಧಿ’ಗೂ ತಟ್ಟಿದ ‘ಟ್ರಾಫಿಕ್ ಬಿಸಿ’
ಇಂದು ದಾವಣಗೆರೆಯಲ್ಲಿ ನಡೆಯುತ್ತಿರುವಂತ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದಂತ ಅವರು, ಕೋಮುವಾದಿ ಬಿಜೆಪಿಯನ್ನು ಕಿತ್ತೊಗೆಯಬೇಕು. ಮತ್ತೆ ಕಾಂಗ್ರೆಸ್ ಅನ್ನು ಈ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಇವತ್ತು ರೈತರು, ಬಡವರು, ದಲಿತರು, ಹಿಂದುಳಿದವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಈ ದೇಶದ ಜನರು ಅತ್ಯಂತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಜಾಪ್ರಭುತ್ವ ಇವತ್ತು ಸಂಕಷ್ಟದಲ್ಲಿದೆ. ಸಂವಿಧಾನಕ್ಕೆ ಇವತ್ತು ರಕ್ಷಣೆ ಇಲ್ಲ ಎಂದರು.
ಭಾರತೀಯ ಜನತಾ ಪಕ್ಷದವಿಗೆ ನಮಗೆಲ್ಲಾ ಸಿಕ್ಕಿರುವಂತ ಸ್ವಾತಂತ್ರ್ಯದ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲ. ಅವರ ಉದ್ದೇಶವೊಂದೆ ಹಿಂದೂ ರಾಷ್ಟ್ರ ನಿರ್ಮಾಣ ಮಾಡಬೇಕು. ಲೂಟಿ ಹೊಡೆಯಬೇಕು. ಈ ದೇಶದ ಸಂವಿಧಾನವನ್ನು ಬದಲಾವಣೆ ಮಾಡಬೇಕು ಎಂಬುದಷ್ಟೇ ಆಗಿದೆ. ಬಿಜೆಪಿಯವರೇ, ಮೋದಿಯವರೇ ನೀವು ಎಂದೆಂದಿಗೂ ಕೂಡ ಕಾಂಗ್ರೆಸ್ ಅನ್ನು ಮುಗಿಸೋದಕ್ಕೆ ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡೋದಕ್ಕೆ ಈ ದೇಶದ ಜನರು ಬಿಡೋದಿಲ್ಲ. ನಿಮ್ಮ ಕನಸು ನನಸಾಗೋದಿಲ್ಲ ಎಂದು ಹೇಳಿದರು.