ಬೆಂಗಳೂರು : ರಾಜ್ಯದಲ್ಲಿ ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡೋ ಪ್ರಕ್ರಿಯೆ ಶುರುವಾಗಿದೆ. ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಆದಷ್ಟೂ ಬೇಗ ಪ್ರಕ್ರಿಯೆ ಶುರು ಮಾಡೋದಾಗಿ ಅಬಕಾರಿ ಸಚಿವ ತಿಮ್ಮಾಪುರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಗೆ ತಯಾರಿ ಆಗ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಡ್ರಾಫ್ಟ್ ರೆಡಿ ಆಗಿ ಸಹಿ ಆಗಿದೆ. ಆದಷ್ಟೂ ಬೇಗ ಹರಾಜು ಪ್ರಕ್ರಿಯೆ ಆಗಲಿದೆ ಎಂದಿದ್ದಾರೆ.
ಜನರಲ್ ಆಗಿ ಹರಾಜು ಹಾಕಬೇಕಾ? ಮೀಸಲಾತಿ ಕೊಡಬೇಕು ಅಂತ ಸಿಎಂ ಜೊತೆ ನಾಳೆ ಚರ್ಚೆ ಮಾಡ್ತೀನಿ. ಹರಾಜು ಪ್ರಕ್ರಿಯೆಯಿಂದ 2 ಸಾವಿರ ಕೋಟಿ ರೂ. ಲಾಭ ಬರಬಹುದು ಅಂತ ನಿರೀಕ್ಷೆ ಇದೆ. ಮೀಸಲಾತಿ ಕೊಟ್ಟರೆ ಸಹಾಯ ಅಗುತ್ತದೆ ಅಂತ ಚರ್ಚೆ ಇದೆ. ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದು ಹೇಳಿದ್ದಾರೆ.