ಬೆಂಗಳೂರು: ಖಾಸಗಿ ಅನುದಾನಿತ ಪ್ರೌಢಶಾಲೆಗಳ ನೇರನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳುವ ಬಗ್ಗೆ ಸರ್ಕಾರದ ಮಹತ್ವದ ಸೂಚನೆಗಳನ್ನು ಹೊರಡಿಸಿತ್ತು. ಅಲ್ಲದೇ ಇದರಂತೆ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಲಾಗಿತ್ತು. ಆದ್ರೇ ಎಸ್ಸಿ, ಎಸ್ಟಿ ಸಮುದಾಯದವರಿಗೆ ನೇಮಕಾತಿಗಳಲ್ಲಿ ಮೀಸಲಾತಿ ಹೆಚ್ಚಳದಿಂದಾಗಿ ಈಗ ಸರ್ಕಾರದ ಖಾಸಗೀ ಅನುದಾನಿತ ಪ್ರೌಢಶಾಲೆಗಳ ನೇರನೇಮಕಾತಿ, ಮುಂಬಡ್ತಿಗೆ ತಡೆಯನ್ನು ನೀಡಿದೆ.
ಅಂಗವಿಕಲರಿಗೆ ಭರ್ಜರಿ ಗುಡ್ ನ್ಯೂಸ್: ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ, ವಸತಿ ಯೋಜನೆಯಲ್ಲಿ ಶೇ.2ರಷ್ಟು ಮೀಸಲಾತಿ
ಈ ಕುರಿತಂತೆ ಸಾರ್ವನಿಕ ಶಿಕ್ಷಣ ಇಲಾಖೆಯಿಂದ ಟಿಪ್ಪಣಿ ಹೊರಡಿಸಲಾಗಿದೆ. ಶಿಕ್ಷಣ ಇಲಾಖೆ ಹೊರಡಿಸಿರುವಂತ ಟಿಪ್ಪಣಿಯಲ್ಲಿ ದಿನಾಂಕ 23-10-2022ರಂದು ಸರ್ಕಾರ ಅನುಸೂಚಿತ ಜಾತಿ, ಪಂಗಡಗಳಿಗೆ ಸೇರಿದಂತ ವ್ಯಕ್ತಿಗಳಿಗೆ ನೇರನೇಮಕಾತಿ, ಪದೋನ್ನತಿಯಲ್ಲಿ ಮೀಸಲಾತಿಯನ್ನು ಜಾರಿಗೊಳಿಸಲು ರೋಸ್ಟರ್ ಬಿಂದುಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿರುವುದರಿಂದ, ಎಲ್ಲಾ ನೇರನೇಮಕಾತಿ, ಮುಂಬಡ್ತಿ ಪ್ರಕ್ರಿಯೆಯನ್ನು ತಡೆಹಿಡಿಯಲು, ಇಲಾಖಾ ಮುಂಬಡ್ತಿ ಸಭೆಯನ್ನು ಆಯೋಜಿಸಬಾರದೆಂದು ಸೂಚಿಸಿದ್ದಾರೆ ಎಂದಿದೆ.
ಈ ಹಿನ್ನಲೆಯಲ್ಲಿ ಖಾಸಗಿ ಅನುದಾನಿತ ಪ್ರೌಢಶಾಲೆಗಳ ನೇರನೇಮಕಾತಿ ಹಾಗೂ ಮುಂಬಡ್ತಿಗೆ ತಡೆ ನೀಡಲಾಗಿದೆ. ದಿನಾಂಕ 01-11-2022 ರಿಂದ ದಿನಾಂಕ 17-11-2022ರ ಅವಧಿಯಲ್ಲಿ ಇಲಾಖಾ ಮುಂಬಡ್ತಿ ಸಭೆ ನಡೆಸಿ ನೀಡಿರುವ ಎಲ್ಲಾ ಮುಂಬಡ್ತಿ ಆದೇಶಗಳನ್ನು ಹಿಂಪಡೆಯಲು ಸಹ ಸೂಚಿಸಲಾಗಿದೆ ಎಂದಿದ್ದಾರೆ.
‘ದ್ವಿತೀಯ PUC ಪರೀಕ್ಷಾ ಶುಲ್ಕ’ ಸಂದಾಯದ ಬಗ್ಗೆ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ದಿನಾಂಕ ವಿಸ್ತರಣೆ
ಸರ್ಕಾರದ ಸೂಚನೆಯ ಹಿನ್ನಲೆಯಲ್ಲಿ ಖಾಸಗೀ ಅನುದಾತಿತ ಪ್ರೌಢ ಶಾಲೆಯಗಳಲ್ಲಿ ಖಾಲಿ ಹುದ್ದೆ ಭರ್ತಿ ಮಡಾಲು ಇಲಾಖಾ ಅನುಮತಿ ಪಡೆದು ದಿನಾಂಕ 01-11-2022ರ ಪೂರ್ವದಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ನೇಮಕಾತಿ ಅನುಮೋದನೆಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ