ಬೆಂಗಳೂರು : ಕೆ.ಎಸ್.ಆರ್.ಪಿ. ಸ್ಟೆ.ಆರ್ಪಿಸಿ (ಸ್ಥಳಿಯೇತರ) 1500 ಹುದ್ದೆ (ಸ್ಥಳೀಯ ವೃಂದದ) 366 ಹುದ್ದೆಗಳನ್ನು ಮತ್ತು ಐ.ಆರ್.ಬಿ., ಮುನಿರಾಬಾದ್ ಘಟಕದ 166 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ವರ್ಗೀಕರಣವನ್ನು ಕಳುಹಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.
ಕೆ.ಎಸ್.ಆರ್.ಪಿ. ಸ್ಟೆ.ಆರ್ಪಿಸಿ (ಪುರುಷ) (ಮಹಿಳೆ) 1500 ಹುದ್ದೆಗಳನ್ನು ಹಾಗೂ (ಸ್ಥಳೀಯ ವೃಂದದ) 445 ಹುದ್ದೆಗಳನ್ನು ಮತ್ತು ಐ.ಆರ್.ಬಿ., ಮುನಿರಾಬಾದ್ ಘಟಕದ 220 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ತಮ್ಮ ಕಛೇರಿಯಿಂದ ಕಳುಹಿಸಲಾದ ನೇರ ಮತ್ತು ಸಮತಳ ವರ್ಗೀಕರಣ ವಿವರವನ್ನು ಪಕ್ಕಕ್ಕಿರಿಸಿದೆ.
ಉಲ್ಲೇಖ (1)ರ ಫ್ಯಾಕ್ಸ್ ಸಂದೇಶದಲ್ಲಿ ತಿಳಿಸಿರುವಂತೆ, ಈ ಜ್ಞಾಪನದಲ್ಲಿ ಲಗತ್ತಿಸಲಾದ ಘಟಕವಾರು ಕೆ.ಎಸ್. ಆರ್.ಪಿ. ಸ್ಪೆ.ಆರ್ಪಿಸಿ (ಸ್ಥಳಿಯೇತರ) 1500 ಹುದ್ದೆ (ಸ್ಥಳೀಯ ವೃಂದದ) 366 ಹುದ್ದೆ ಮತ್ತು ಐ.ಆರ್.ಬಿ., ಮುನಿರಾಬಾದ್ ಘಟಕದ 166 ಹುದ್ದೆಗಳಿಗೆ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 02 ಸೆಹಿಮ 2025 ದಿನಾಂಕ 03-09-2025ರನ್ವಯ ರೋಸ್ಟರ್ 01 ರಿಂದ ಪ್ರಾರಂಭಿಸಿ ಕ್ರೀಡಾಪಟುಗಳಿಗೆ ಶೇಕಡಾ 3% ಮೀಸಲಿರಿಸಿರುವ ಹುದ್ದೆಗಳನ್ನು ಹೊರತುಪಡಿಸಿ ನಮೂನೆ ವಿವರದ ಸಾಮಾನ್ಯ ಕಾಲಂನಡಿ ಗುರುತಿಸಲಾದ ಹುದ್ದೆಗಳಿಗೆ ನೇರ ಮತ್ತು ಸಮತಳ ವರ್ಗೀಕರಣವನ್ನು ನಮೂನೆ ವಿವರದಲ್ಲಿ ಮರು ಟಪಾಲಿನಲ್ಲಿ ಆದ್ಯತೆ ಮೇರೆಗೆ ಈ ಕಛೇರಿಗೆ ತಲುಪಿಸಲು ಹಾಗೂ ಈ ಕಛೇರಿಯ ಇ-ಮೇಲ್ ಸಂದೇಶ ವಿಳಾಸ est6ksrphq@ksp.gov.in ಗೆ ಕೂಡಲೇ ಸಂದೇಶದ ಮುಖೇನ ಕಳುಹಿಸಲು ಸೂಚಿಸಿದೆ. ಮಾಹಿತಿ ಅತ್ಯಾವಶ್ಯಕವೆಂದು ಪರಿಗಣಿಸತಕ್ಕದ್ದು.