ಬೆಂಗಳೂರು: ಬಿಜೆಪಿ ಸಮಾವೇಶ ( BJP Samavesha ) ಮಾಡ್ತಿರೋದು ಕರ್ನಾಟಕದಲ್ಲಿ. ಮತ ಕೇಳುವುದು ಕನ್ನಡಿಗರದ್ದು. ಆದರೆ ಬಿಜೆಪಿ ಪಕ್ಷದ ( BJP Party ) ಪ್ರೀತಿ ಪ್ರೇಮ ಮಾತ್ರ ಹಿಂದಿ ಮೇಲೆ. ಕನ್ನಡ ನಾಡಿನಲ್ಲಿ ಹಿಂದಿ ಹೇರಿಕೆ ನಡೆಸುವ ಗುತ್ತಿಗೆಯನ್ನು ನಗಪುರದಿಂದ ಪಡೆದಿದ್ದೀರಾ, ಹೈಕಮಂಡಿನಿಂದ ಪಡೆದಿದ್ದೀರಾ ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ? ಎಂದು ಕರ್ನಾಟಕ ಕಾಂಗ್ರೆಸ್( Karnataka Congress ), ಬಿಜೆಪಿ ಪಕ್ಷವನ್ನು ಪ್ರಶ್ನಿಸಿದೆ.
ಬಿಜೆಪಿ ಸಮಾವೇಶ ಮಾಡ್ತಿರೋದು ಕರ್ನಾಟಕದಲ್ಲಿ.
ಮತ ಕೇಳುವುದು ಕನ್ನಡಿಗರದ್ದು.
ಆದರೆ @BJP4Karnataka ಪಕ್ಷದ ಪ್ರೀತಿ ಪ್ರೇಮ ಮಾತ್ರ ಹಿಂದಿ ಮೇಲೆ.ಕನ್ನಡ ನಾಡಿನಲ್ಲಿ ಹಿಂದಿ ಹೇರಿಕೆ ನಡೆಸುವ ಗುತ್ತಿಗೆಯನ್ನು ನಗಪುರದಿಂದ ಪಡೆದಿದ್ದೀರಾ, ಹೈಕಮಂಡಿನಿಂದ ಪಡೆದಿದ್ದೀರಾ @BSBommai ಅವರೇ?#ಜನಸಂಕಟಯಾತ್ರೆ pic.twitter.com/TiHaHDLq0g
— Karnataka Congress (@INCKarnataka) November 9, 2022
ಈ ಕುರಿತು ಸರಣಿ ಟ್ವಿಟ್ ಮಾಡಿದ್ದು, ಬಿಜೆಪಿ ನಡೆಸುತ್ತಿರುವುದು ಜನ ಸಂಕಲ್ಪ ಸಮವೇಶವಲ್ಲ, #ಜನಸಂಕಟ ಸಮಾವೇಶ! ಸಂಕಷ್ಟದಲ್ಲಿರುವ ರೈತರ ಆತ್ಮಹತ್ಯೆ ಹೆಚ್ಚಿದೆ. ರಸ್ತೆ ಗುಂಡಿಗೆ ದಿನಕ್ಕೊಬ್ಬರ ಬಲಿಯಾಗುತ್ತಿದೆ. ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಸಿಗ್ತಿಲ್ಲ. ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಉದ್ಯೋಗ ಸಿಗ್ತಿಲ್ಲ. 108 ಸಿಬ್ಬಂದಿಗಳಿಗೆ ಸಂಬಳವಿಲ್ಲ ಎಂದು ವಾಗ್ಧಾಳಿ ನಡೆಸಿದೆ.
ಬಿಜೆಪಿ ನಡೆಸುತ್ತಿರುವುದು ಜನ ಸಂಕಲ್ಪ ಸಮವೇಶವಲ್ಲ, #ಜನಸಂಕಟ ಸಮಾವೇಶ!
◆ಸಂಕಷ್ಟದಲ್ಲಿರುವ ರೈತರ ಆತ್ಮಹತ್ಯೆ ಹೆಚ್ಚಿದೆ
◆ರಸ್ತೆ ಗುಂಡಿಗೆ ದಿನಕ್ಕೊಬ್ಬರ ಬಲಿಯಾಗುತ್ತಿದೆ
◆ವಿದ್ಯಾರ್ಥಿಗಳಿಗೆ ಇನ್ನೂ ಪಠ್ಯಪುಸ್ತಕ ಸಿಗ್ತಿಲ್ಲ
◆ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಉದ್ಯೋಗ ಸಿಗ್ತಿಲ್ಲ
◆108 ಸಿಬ್ಬಂದಿಗಳಿಗೆ ಸಂಬಳವಿಲ್ಲ#ಜನಸಂಕಟಸಮಾವೇಶ— Karnataka Congress (@INCKarnataka) November 9, 2022
ಇನ್ನೂ ಮುಂದುವರೆದು ಉತ್ತರ ಕರ್ನಾಟಕದಲ್ಲಿ ಅಪೌಷ್ಟಿಕತೆ ಹೆಚ್ಚಿದೆ. ಅಪೌಷ್ಟಿಕತೆಯಿಂದ ರಾಜ್ಯದಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು ಹೆಚ್ಚಿದೆ. ರಾಜ್ಯದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ. ರೈತರ ಆತ್ಮಹತ್ಯೆ ಹೆಚ್ಚಿದೆ ಬಸವರಾಜ ಬೊಮ್ಮಾಯಿ ಅವರೇ, ಜನರಿಗೆ ಸಂಕಟ ನೀಡುತ್ತಿರುವ ತಮ್ಮ ಸರ್ಕಾರ ನಡೆಸುತ್ತಿರುವುದು #ಜನಸಂಕಟಸಮಾವೇಶ ಅಲ್ಲದೆ ಇನ್ನೇನು? ಎಂದು ಕೇಳಿದೆ.
◆ಉತ್ತರ ಕರ್ನಾಟಕದಲ್ಲಿ ಅಪೌಷ್ಟಿಕತೆ ಹೆಚ್ಚಿದೆ
◆ಅಪೌಷ್ಟಿಕತೆಯಿಂದ ರಾಜ್ಯದಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು ಹೆಚ್ಚಿದೆ
◆ರಾಜ್ಯದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣ ಹೆಚ್ಚಿದೆ
◆ರೈತರ ಆತ್ಮಹತ್ಯೆ ಹೆಚ್ಚಿದೆ@BSBommai ಅವರೇ, ಜನರಿಗೆ ಸಂಕಟ ನೀಡುತ್ತಿರುವ ತಮ್ಮ ಸರ್ಕಾರ ನಡೆಸುತ್ತಿರುವುದು#ಜನಸಂಕಟಸಮಾವೇಶ ಅಲ್ಲದೆ ಇನ್ನೇನು?— Karnataka Congress (@INCKarnataka) November 9, 2022
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳಪೆಯಾಗಿರುವುದನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಬಿಡಿಸಿಟ್ಟಿದ್ದಾರೆ. ಅರಗ ಜ್ಞಾನೇಂದ್ರ ಅವರೇ, ಇದು ನಿಮ್ಮ ಅಸಾಮರ್ಥ್ಯದ ಅನಾವರಣ, ನಿಮ್ಮ ತವರು ಜಿಲ್ಲೆಯಲ್ಲೇ ಪೊಲೀಸ್ ಇಲಾಖೆ ಕಡುವೈಫಲ್ಯ ಕಂಡಿರುವಾಗ ಇಡೀ ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ತಲುಪಿರುವುದನ್ನು ಒಪ್ಪುವಿರಾ? ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಳಪೆಯಾಗಿರುವುದನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಅವರೇ ಬಿಡಿಸಿಟ್ಟಿದ್ದಾರೆ.@JnanendraAraga ಅವರೇ, ಇದು ನಿಮ್ಮ ಅಸಾಮರ್ಥ್ಯದ ಅನಾವರಣ,
ನಿಮ್ಮ ತವರು ಜಿಲ್ಲೆಯಲ್ಲೇ ಪೊಲೀಸ್ ಇಲಾಖೆ ಕಡುವೈಫಲ್ಯ ಕಂಡಿರುವಾಗ ಇಡೀ ರಾಜ್ಯದಲ್ಲಿ ಹೀನಾಯ ಸ್ಥಿತಿಗೆ ತಲುಪಿರುವುದನ್ನು ಒಪ್ಪುವಿರಾ?#ಜನಸಂಕಟಯಾತ್ರೆ pic.twitter.com/De8HV3Uoo1— Karnataka Congress (@INCKarnataka) November 9, 2022