ತುಮಕೂರು: ಶಿಕ್ಷಣ ಇಲಾಖೆಯಲ್ಲಿ ಕಮೀಷನ್ ಆರೋಪ ಸಂಬಂಧ ಪ್ರಧಾನಿ ಮೋದಿ ಅವರಿಗೆ ರುಪ್ಸಾ ಶಿಕ್ಷಣ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದೆ. ಆದ್ರೇ.. ಹೀಗೆ ದೂರು ಕೊಡೋ ಮೊದಲು ರಾಜ್ಯದಲ್ಲಿ ಯಾರಿಗಾದ್ರು ರುಪ್ಸಾ ದೂರು ಕೊಟ್ಟಿದ್ಯಾ.? ದೂರು ಕೊಟ್ಟಿದ್ದರೇ ಕ್ರಮ ಕೈಗೊಳ್ಳದೇ ಇದ್ದರೇ ಆಗ ಮಾತನಾಡಬೇಕಿತ್ತು ಎಂಬುದಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ವಾಗ್ಧಾಳಿ ನಡೆಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈಗ ಆಧಾರ ರಹಿತವಾಗಿ ಆರೋಪ ಮಾಡೋರ ಸಂಖ್ಯೆ ಹೆಚ್ಚಾಗಿದೆ. ರುಪ್ಸಾದವರು ಇಲಾಖೆಯ ವಿರುದ್ಧ ಕಮೀಷನ್ ಆರೋಪ ಮಾಡಿದ್ದಾರೆ ಎಂದರು.
ರುಪ್ಸಾ ಶಿಕ್ಷಣ ಇಲಾಖೆಯಲ್ಲಿ ಕಮೀಷನ್ ಆರೋಪದ ಬಗ್ಗೆ ಏನಾದ್ರೂ ದೂರು ನೀಡಿದ್ದಾರಾ.? ದೂರು ನೀಡಿದಂತ ದಾಖಲೆ ಇದ್ದರೇ ನನಗೆ ನೀಡಲಿ, ನನಗೆ ನೀಡುವುದು ಬೇಡ ಬಿಇಓ, ಡಿಡಿಪಿಐ, ಇಲ್ಲವೇ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನೀಡಲಿ. ಆರೋಪದ ಬಗ್ಗೆ ಯಾವುದಾದರೂ ಒಂದು ದಾಖಲೆ ಕೊಡಿ, ಆಗ ಕ್ರಮ ಕೈಗೊಳ್ಳದೇ ಇದ್ದರೇ ನಿಮ್ಮ ಆರೋಪಕ್ಕೆ ಒಂದು ಅರ್ಥವಿರಲಿದೆ ಎಂದರು.
ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕೇಸ್: ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ.?