ಧಾರವಾಡ : ಧಾರವಾಡದ ಬಳಿ ಅಕ್ರಮವಾಗಿ ಸ್ಪಿರಿಟ್ ಅನ್ನು ಸಾಗಿಸುತ್ತಿದ್ದ ವಾಹನದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ದಾಳಿಯ ವೇಳೆ ಅಂದಾಜು 2 ಲಕ್ಷ ಮೌಲ್ಯದ 350 ಲೀಟರ್ ಸ್ಪಿರಿಟ್ ಅನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೌದು ಟವೇರಾ ವಾಹನದಲ್ಲಿ ಧಾರವಾದದಿಂದ ಹುಬ್ಬಳ್ಳಿಗೆ ಸಾಗಿಸುತ್ತಿದ್ದಾಗ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಸಿಬಿ ಪೊಲೀಸರ ದಾಳಿಯ ವೇಳೆ ವಾಹನದಲ್ಲಿ ಇದ್ದಂತಹ ಇಬ್ಬರು ಪರಾರಿಯಾಗಿದ್ದಾರೆ. ಜಪ್ತಿ ಮಾಡಿದಂತ ಸ್ಪಿರಿಟ್ ಅನ್ನು ಧಾರವಾಡ ಉಪನಗರ ಠಾಣೆಯ ಸಿಸಿಬಿ ಅಧಿಕಾರಿಗಳು ಒಪ್ಪಿಸಿದ್ದಾರೆ. ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.