ವಿಜಯಪುರ: ನಿನ್ನೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅನಾರೋಗ್ಯದಿಂದ ನಿಧನರಾಗಿದ್ದರು. ಅವರ ಅಂತಿಮ ದರ್ಶನಕ್ಕೆ ವಿಜಯಪುರದ ಸೈನಿಕ ಶಾಲೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ವಿಜಯಪುರದ ಇತಿಹಾಸದಲ್ಲೇ ಕಂಡು ಕೇಳರಿಯದ ಭಕ್ತಗಣ ಶ್ರೀಗಳ ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ. ಹೀಗಾಗಿ ಕಿಲೋ ಮೀಟರ್ ಗಟ್ಟಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
ಹೌದು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ವಿಜಯಪುರದ ಸೈನಿಕ ಶಾಲೆ ಮೈದಾನಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಗಣ ಅಂತಿಮ ದರ್ಶನ ಪಡೆಯಲು ಆಗಮಿಸಿರೋ ಕಾರಣ, ಕಿಲೋ ಮೀಟರ್ ಗಟ್ಟಲೇ ಸಾಲು ಉಂಟಾಗಿದೆ.
ವಿಜಯಪುರದ ಇತಿಹಾಸದಲ್ಲೇ ಕಂಡು ಕೇಳರಿಯದಷ್ಟು ಭಕ್ತಗಣ ಸಿದ್ದೇಶ್ವರ ಸ್ವಾಮೀಜಿಯ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ, ಸುಡುವ ಬಿಸಿಲನ್ನೂ ಲೆಕ್ಕಿಸದೇ ನಿಂತಿದೆ. ಕೆಲವೆಡೆ ಭಕ್ತರ ನೂಕು ನುಗ್ಗಲು ಉಂಟಾದಾಗ ಪೊಲೀಸರು ಲಾಠಿ ಬೀಸಿ ನಿಯಂತ್ರಿಸಿದ್ದು ಕಂಡು ಬಂದಿದೆ.
ಈ ನಡುವೆ ಭಕ್ತರು ಅಂತಿಮ ದರ್ಶನಕ್ಕೆ ಕಿಲೋ ಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತ ಕಾರಣ, ಸಿದ್ದೇಶ್ವರ ಸ್ವಾಮೀಜಿಯ ಅಂತಿಮ ದರ್ಶನವನ್ನು ನಾಳೆಯವರೆಗೆ ಜಿಲ್ಲಾಡಳಿತ ವಿಸ್ತರಿಸಿ ಆದೇಶಿಸಿದೆ. ಅಲ್ಲದೇ ಭಕ್ತರು ಯಾರೂ ಅವಸರಿಸದೇ, ಶಾಂತತೆಯಿಂದ ಸ್ವಾಮೀಜಿಯ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದೆ.
BIGG NEWS: ಸಿದ್ದೇಶ್ವರ ಶ್ರೀಗಳು ಅಸ್ತಂಗತ:ನಿಡಗುಂದಿ ಪಟ್ಟಣ ಬಂದ್; ಸ್ವಾಮೀಜಿ ಭಾವಪೂರ್ಣ ಶ್ರದ್ಧಾಂಜಲಿ