ನವದೆಹಲಿ : ನಿನ್ನೆ ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.
ಮೋದಿ ಭೇಟಿಯಾದ ದೇವೇಗೌಡರು ಕುಂಚಿಟಿಗ ಸಮುದಾಯಕ್ಕೆ ನೀಡಬೇಕಾದ ಮೀಸಲಾತಿ ಬಗ್ಗೆ ಚರ್ಚೆ ನಡೆಸಿದರು. ಆರೋಗ್ಯ ಕೈ ಕೊಟ್ಟ ಹಿನ್ನೆಲೆ ವ್ಹೀಲ್ ಚೇರ್ ನಲ್ಲೇ ಪ್ರಧಾನಿ ಮೋದಿ ಭೇಟಿಯಾದ ದೇವೇಗೌಡರು , ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಒತ್ತಾಯಿಸಿದ್ದಾರೆ.
ವ್ಹೀಲ್ ಚೇರ್ ನಲ್ಲೇ ಪ್ರಧಾನಿ ಮೋದಿ ಭೇಟಿಯಾದ ದೇವೇಗೌಡರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರು ನಾಯಕರ ಭೇಟಿ ಹಲವು ಚರ್ಚೆಗಳಿಗೆ ಕಾರಣವಾಗಿದೆ. ಚುನಾವಣಾ ಹೊಸ್ತಿಲಲ್ಲೇ ದೇವೇಗೌಡರು ಮೀಸಲಾತಿ ದಾಳ ಉರುಳಿಸಿದ್ದಾರೆ.
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಡಿ.18 ರಂದು ಧಾರವಾಡದಲ್ಲಿ ಉದ್ಯೋಗ ಮೇಳ ಆಯೋಜನೆ