ಬೆಂಗಳೂರು : ಆನೆಗಳ ಚಲನವಲನಗಳ ಮೇಲೆ ನಿಗಾವಹಿಸಲು ಅರಣ್ಯ ಇಲಾಖೆ ಸಹಯೋಗದೊಂದಿಗೆ ಇನ್ ಫಿಕ್ಷನ್ ಲ್ಯಾಬ್ ಸಂಸ್ಥೆ ಅಭಿವೃದ್ಧಿ ಮಾಡಿರುವ ದೇಶೀಯ ಕರ್ನಾ ಟಕ-ಪರಿಶೋಧಿತ ಪತ್ತೆ (ಕೆಪಿ ಟ್ರ್ಯಾಕರ್) ಹೆಸರಿನ ರೇಡಿಯೋ ಕಾಲರ್ ಅನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಲೋಕಾರ್ಪಣೆ ಮಾಡಿದರು.
ಅರಣ್ಯ ಭವನದಲ್ಲಿ ಬುಧವಾರ ಏರ್ಪ ಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂತನ ರೇಡಿಯೋ ಕಾಲರ್ ಅನ್ನು ಬಂಡೀಪುರ ಮತ್ತು ನಾಗರಹೊಳೆ ಹುಲಿಸಂರಕ್ಷಿತ ಪ್ರದೇ ಶದ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಖಂಡ್ರೆ, ಕೊಡಗು, ಚಿಕ್ಕಮಗಳೂರು, ಹಾಸನ ಸೇರಿ ಮತ್ತಿತರಜಿಲ್ಲೆಗಳಲ್ಲಿ ಆನೆಗಳು ನಾಡಿಗೆ ಬರುವುದನ್ನು ತಡೆಯಲು, ಚಲನವಲನದ ಮೇಲೆ ನಿಗಾವಹಿಸಲು ಆನೆಗಳ ಗುಂಪಿನ ನಾಯಕಿಗೆ ಅಳವಡಿಸ ಲಾಗುವುದು. ಅದರಿಂದ ಆನೆಗಳ ಸಂಚಾರದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾ ಗುವುದು ಎಂದರು.
ಆನೆ ಮಾನವ ಸಂಘರ್ಷದಲ್ಲಿ ಹೆಚ್ಚಿನ ಸಾವು ನೋವು ಆಗುತ್ತಿವೆ. ಆನೆಗಳ ಚಲನ ವಲನ ತಿಳಿಯಲು ರೇಡಿಯೋ ಕಾಲರ್ ಬಳಸುತ್ತಿದ್ದೇವೆ. ಇಷ್ಟು ದಿನ ವಿದೇಶದ ರೇಡಿಯೋ ಕಾಲರ್ ಗಳನ್ನು ಬಳಸುತ್ತಿದ್ದೆವು 50 ಆನೆಗಳು ಕೊಡಗಿನ ಅರಣ್ಯದಲ್ಲಿಯೇ ಇರುವುದಿಲ್ಲ. ಅರಣ್ಯದ ಹೊರಗಡೆ ಕಾಫಿ ಪ್ಲಾಂಟನಲ್ಲೇ ಆನೆಗಳು ಇರುತ್ತವೆ. ರೇಡಿಯೋ ಕಾಲರ್ ಅಳವಡಿಸಲು ವಿದೇಶದಿಂದ 65 ಆಮದು ಮಾಡಿದ್ದೇವೆ. ಈಗ ಕರ್ನಾಟಕದಲ್ಲಿ ರೇಡಿಯೋ ಕಾಲರ್ ಗಳನ್ನು ತಯಾರು ಮಾಡಲಾಗಿದೆ.
ಅಧಿಕಾರಿಗಳೇ ಅಧ್ಯಯನ ಮಾಡಿ ರೇಡಿಯೋ ಕಾಲರ್ಗಳನ್ನು ತಯಾರಿಸಿದ್ದಾರೆ. ವಿದೇಶಿ ವಿಡಿಯೋ ಕಾಲರ್ ವೆಚ್ಚ 5 ರಿಂದ 6 ಲಕ್ಷ ರೂಪಾಯಿ ಆಗುತ್ತಿತ್ತು. ಇದೀಗ ನಾವೇ ತಯಾರಿಸ್ತಾ ರೇಡಿಯೋ ಕೋಲಾರ್ಗೆ ಕೇವಲ ಒಂದುವರೆ ಲಕ್ಷ ರೂಪಾಯಿ ಆಗಿದೆ ಪರಿಸರಕ್ಕೆ ಹಾನಿಯಾಗದ ರೀತಿ ರೇಡಿಯೋ ಕಾಲರ್‌ಗಳನ್ನು ತಯಾರಿಸಿದ್ದೇವೆ. ಕೇಶವ ರೇಡಿಯೋ ಕೋಲಾರ್ 7 ಕೆ.ಜಿ ಎಷ್ಟು ತೂಕ ಇರುತ್ತದೆ ಎಂದು ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ರಾಜ್ಯದಲ್ಲಿ 6,395 ಆನೆಗಳಿವೆ. ಪ್ರತಿ ವರ್ಷ ಆನೆಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕನುಗುಣವಾಗಿ ಅರಣ್ಯ ಪ್ರದೇಶ ವಿಸ್ತರಣೆಯಾಗುತ್ತಿಲ್ಲ. ಹೀಗಾಗಿ ಆನೆ-ಮಾನವ ಸಂಘರ್ಷ ಹೆಚ್ಚುವಂತಾಗಿದೆ. ಕೆಲವೊಮ್ಮೆ ಪ್ರಾಣಹಾನಿಗಳಾಗುತ್ತಿದೆ. ಅದನ್ನು ತಡೆಯಲು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ ಮೇಲೆ ನಿಗಾವಹಿಸುವ ಕೆಲಸ ಮಾಡಲಾ ಗುವುದು ಎಂದರು.