ಮಂಗಳೂರು : ಸಿಎಫೈಐ (CFI ) ಗರ್ಲ್ಸ್ ಕಾನ್ಫರೆನ್ಸ್ ಗೆ ಅನುಮತಿ ನಿರಾಕರಿಸಿದ್ದಕ್ಕೆ ಮಂಗಳೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಂದ ಧರಣೆ ನಡೆಸುತ್ತಿದ್ದಾರೆ. ಪ್ರೊಟೆಸ್ಟ್ ಮಾಡಿದ ವಿದ್ಯಾರ್ಥಿನಿಗಳನ್ನು ಖಾಕಿ ಪಡೆ ತರಾಟೆ ತೆಗೆದುಕೊಂಡಿದ್ದಾರೆ.
ಪ್ರತಿಭಟನೆ ವಿರುದ್ಧ ಕಮಿಷನರ್ ವಾರ್ನ್ ಮಾಡಿದ್ದರೂ ಬಳಿಕ ಮಿಲಾಗ್ರಿಸ್ ಬಳಿ ಪೊಲೀಸ್ ಕಮಿಷನರ್ ಮತ್ತು ಸಿಎಫೈಐ ಮುಖಂಡರು ವಾಗ್ವಾದ ನಡೆಸಿದ್ರೂ, ಪ್ರತಿಭಟನೆಯ ಪಟ್ಟು ಹಿಡಿದು ಸಿಎಫೈಐ ಮುಖಂಡರು ಮಂಗಳೂರಿನ ಮಿಲಾಗ್ರಿಸ್ ಬಳಿ ಜಾಗ ಖಾಲಿ ಮಾಡಿದರು. ಸದ್ಯ ಪುರಭವನದಲ್ಲಿ ಪೊಲೀಸರು CFI ಸಮಾವೇಶ ನಡೆಸಲು ಅನುಮತಿ ನೀಡಲಾಗಿದೆ. ಪೊಲೀಸರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಬಸ್ಸ್ ಹತ್ತಿದ ವಿದ್ಯಾರ್ಥಿನಿಯರು ಪುರಭವನದತ್ತ ಮುಸ್ಲಿಂವಿದ್ಯಾರ್ಥಿನಿಯರು ತೆರಳಿದ್ದಾರೆ.
CFI ರ್ಯಾಲಿಗೆ ಅವಕಾಶ ನಿರಾಕರಿಸಿದ್ದ ಮಂಗಳೂರು ಪೊಲೀಸರು ಪುರಭವನ ಬಳಿ ಸಮಾವೇಶ ನಡೆಸಲು ಅನುಮತಿ ನೀಡಲಾಗಿತ್ತು. ಆದರೂ ಯುವತಿಯರ ದಾರಿ ತಪ್ಪಿಸುತ್ತಿದ್ದೀರಾ? ಎಂದು ಸಿಎಫೈಐ ಮುಖಂಡರಿಗೆ ಕಮಿಷನರ್ ಎನ್ ಶಶಿಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.