ನವದೆಹಲಿ: ಮಳೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ದೇಶದ ನಾನಾ ಕಡೆಗಳಲ್ಲಿ ನೀರು ನಿಂತಿರುವುದನ್ನು ನಾವು ನೋಡಬಹುದಾಗಿದೆ. ಈ ನಡುವೆ ಡೆಂಗ್ಯೂ ಸೊಳ್ಳೆಯು ಪ್ರತಿ ಮನೆಯಲ್ಲಿ ಅಥವಾ ಹೊರಗೆ ತುಂಬಿದ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿದ್ದು ಇದು ಜನರನ್ನು ತೊಂದರೆಗೆ ಈಡು ಮಾಡುತ್ತಿದೆ.
ಹೌದು, ದೇಶದಲ್ಲಿ ಈವರೆಗೆ 30,000 ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ತಗುಲಿದೆ. ದೇಶದ ಅನೇಕ ರಾಜ್ಯಗಳಲ್ಲಿ ಡೆಂಗ್ಯೂವಿನ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದ ದತ್ತಾಂಶದಲ್ಲಿ, ಕರ್ನಾಟಕ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಪರಿಸ್ಥಿತಿ ಉತ್ತಮವಾಗಿಲ್ಲ ಎನ್ನಲಾಗಿದೆ.
BIG NEWS: ಮಕ್ಕಳಲ್ಲಿ ಟೈಪ್ 1 ಮಧುಮೇಹದಲ್ಲಿ ಶೇ.72ರಷ್ಟು ಹೆಚ್ಚಳಕ್ಕೆ ಕೋವಿಡ್ ಕಾರಣ: ಅಧ್ಯಯನ ವರದಿ
ಈ ವರ್ಷ, ಪ್ರತಿ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮದ ದತ್ತಾಂಶದ ಪ್ರಕಾರ, ಆಗಸ್ಟ್ ಅಂತ್ಯದವರೆಗೆ ದೇಶಾದ್ಯಂತ 30627 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಸುಮಾರು 12 ಜನರು ಸಾವನ್ನಪ್ಪಿದ್ದಾರೆ. ಈ ಬಾರಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ 96 ಪ್ರಕರಣಗಳು ಪತ್ತೆಯಾಗಿವೆ. ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ. ನಾಗಾಲ್ಯಾಂಡ್ ನಲ್ಲಿ 2 ಪ್ರಕರಣಗಳು ದಾಖಲಾಗಿವೆ. 2021 ರಲ್ಲಿ, 1 ಲಕ್ಷ 93 ಸಾವಿರ ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು ಮತ್ತು 346 ಸಾವುಗಳು ಪ್ರಕರಣ ದಾಖಲಾಗಿದೆ.
ಯಕೃತ್ತಿನ ಮೇಲೆ ದಾಳಿ ಮಾಡುವ ಡೆಂಗ್ಯೂ ವೈರಸ್ : ಡೆಂಗ್ಯೂ ಪ್ರತಿ ವರ್ಷ ದೇಶದಲ್ಲಿ ಸಾವಿರಾರು ಜನರನ್ನು ಬಾಧಿಸುತ್ತದೆ. ಅವರಲ್ಲಿ ಕೆಲವರು ಸಾಯುತ್ತಾರೆ. ಡೆಂಗ್ಯೂ ರೋಗಲಕ್ಷಣಗಳಲ್ಲಿ ಜ್ವರವು ಸಾಮಾನ್ಯವಾಗಿದೆ, ಆದರೆ ಈ ಬಾರಿ ಡೆಂಗ್ಯೂವಿನ ಕೆಲವು ಹೊಸ ರೋಗಲಕ್ಷಣಗಳು ಹೊರಹೊಮ್ಮಿವೆ. ವೈದ್ಯರ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಡೆಂಗ್ಯೂ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಬಂದ ರೋಗಿಗಳಲ್ಲಿ ಕಾಣುವ ಪ್ರಮುಕ ಅಂಶವರಂದ್ರೆ, ಅವರಲ್ಲಿ ಆಂತರಿಕ ರಕ್ತಸ್ರಾವ, ಹಠಾತ್ ರಕ್ತದೊತ್ತಡದ ಘಟನೆ ಮತ್ತು ಪಿತ್ತಜನಕಾಂಗದ ಸೋಂಕು ಇರೋದು ಕಂಡು ಬಂದಿದೆ. 2015 ಮತ್ತು 2016 ರಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಾರಿ ಅಷ್ಟು ಅಪಾಯವಿಲ್ಲ ಆದರೆ ಡೆಂಗ್ಯೂ ತನ್ನ ರೋಗಲಕ್ಷಣಗಳನ್ನು ಬದಲಾಯಿಸಿದೆ. ಡೆಂಗ್ಯೂ ತೊಡಕುಗಳು ರೋಗಿಯ ವಯಸ್ಸು ಮತ್ತು ಆರೋಗ್ಯದ ಮೇಲೆ ಅವಲಂಬಿತವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಯಾವುದೇ ವ್ಯಕ್ತಿಯು ಜ್ವರ, ಮೈಕೈ ನೋವು, ಹೊಟ್ಟೆ ತೊಂದರೆಗಳು ಅಥವಾ ಇತರ ಸಮಸ್ಯೆಗಳನ್ನು ಹೊಂದಿದ್ದರೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ.
ಡೆಂಗ್ಯೂ ಹೆಣ್ಣು ಸೊಳ್ಳೆಯಿಂದ ಉಂಟಾಗುತ್ತದೆ : ಡೆಂಗ್ಯೂ ರೋಗವು ಈಡಿಸ್ ಅಡಿಪ್ತಿ ಎಂಬ ಹೆಣ್ಣು ಸೊಳ್ಳೆಯಿಂದ ಉಂಟಾಗುತ್ತದೆ. ಈ ಸೋಂಕಿತ ಸೊಳ್ಳೆ ವ್ಯಕ್ತಿಯನ್ನು ಕಚ್ಚಿದ ವೇಳೆಯಲ್ಲಿ ಸೋಂಕಿತ ವೈರಸ್ ಅನ್ನು ಅವನ ದೇಹದಲ್ಲಿ ಬಿಡುತ್ತದೆ. ಡೆಂಗ್ಯೂ ಸಂಭವಿಸಿದಾಗ ರಕ್ತದಲ್ಲಿ ಪ್ಲೇಟ್ ಲೆಟ್ ಗಳು ವೇಗವಾಗಿ ಕಡಿಮೆಯಾಗುತ್ತವೆ. ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಪ್ಲೇಟ್ಲೆಟ್ಗಳನ್ನು ಹೊಂದಿರಬೇಕು, ಆದರೆ ಡೆಂಗ್ಯೂ ಇದ್ದಾಗ, ಅದು ತುಂಬಾ ವೇಗವಾಗಿ ಕಡಿಮೆಯಾಗುತ್ತದೆ, ಕೆಲವೊಮ್ಮೆ ರೋಗಿಯು ಕೇವಲ 10 ರಿಂದ 20 ಸಾವಿರ ಪ್ಲೇಟ್ಲೆಟ್ಗಳನ್ನು ಮಾತ್ರ ಹೊಂದಿರುವುದನ್ನು ಕಾಣಬಹದಾಗಿದೆ ಇದು ದೇಹದ ವಿವಿಧ ಭಾಗಗಳಿಂದ ರಕ್ತಸ್ರಾವದ ಅಪಾಯವನ್ನು ಹೆಚ್ಚಿಸುತ್ತದೆ. ಡೆಂಗ್ಯೂ ರೋಗಲಕ್ಷಣಗಳು ಕಾಣಿಸಿಕೊಳ್ಳಲು 5 ರಿಂದ 7 ದಿನಗಳು ಬೇಕಾಗುತ್ತದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲೇ ವೈದ್ಯರನ್ನು ಕಾಣಬೇಕಾಗಿದೆ.