ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜನಮತಗಣನೆ ನಡೆಸುವುದು ಅಥವಾ ‘ಸ್ವಯಂ ನಿರ್ಧಾರದ ಹಕ್ಕನ್ನು’ ಪ್ರತಿಪಾದಿಸುವುದು ಪ್ರತ್ಯೇಕತಾವಾದಿ ಚಟುವಟಿಕೆ ಮತ್ತು ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಅಪರಾಧ ಎಂದು ಯುಎಪಿಎ ನ್ಯಾಯಮಂಡಳಿ ಮಹತ್ವದ ಆದೇಶದಲ್ಲಿ ತೀರ್ಪು ನೀಡಿದೆ.

ಯುಎಪಿಎ ನ್ಯಾಯಮಂಡಳಿ ಜೂನ್ 22 ರಂದು 148 ಪುಟಗಳ ತೀರ್ಪಿನಲ್ಲಿ ಭಯೋತ್ಪಾದಕ ಮಸ್ರತ್ ಆಲಂ ಸಂಘಟನೆಯಾದ ಮುಸ್ಲಿಂ ಲೀಗ್ ಜಮ್ಮು ಕಾಶ್ಮೀರ (ಮಸ್ರತ್ ಆಲಂ ಬಣ) ಮೇಲಿನ ನಿಷೇಧವನ್ನ ಎತ್ತಿಹಿಡಿದಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಕೇಂದ್ರವು ಈ ಸಂಘಟನೆಯನ್ನ ನಿಷೇಧಿಸಿತ್ತು ಮತ್ತು ಆಲಂನನ್ನ ದೆಹಲಿಯ ತಿಹಾರ್ ಜೈಲಿನಲ್ಲಿರಿಸಲಾಗಿದೆ. 1948 ರ ವಿಶ್ವಸಂಸ್ಥೆಯ ನಿರ್ಣಯಗಳ ಪ್ರಕಾರ ಜನರು ಮತ್ತು ಜಮ್ಮು ಮತ್ತು ಕಾಶ್ಮೀರದ ಸ್ವಯಂ ನಿರ್ಣಯ ಮತ್ತು ಜನಮತಗಣನೆಗಾಗಿ ಮಾತ್ರ ಹೋರಾಡುತ್ತದೆ ಎಂದು ಆಲಂನ ಸಂಘಟನೆ ನ್ಯಾಯಮಂಡಳಿಯ ಮುಂದೆ ನಿಷೇಧವನ್ನ ಪ್ರಶ್ನಿಸಿತು. ಆದಾಗ್ಯೂ, ಯುಎಪಿಎ ನ್ಯಾಯಮಂಡಳಿ ಈ ವಾದವನ್ನ ತಿರಸ್ಕರಿಸಿದೆ.

 

 

ಮುಡಾ ಅಕ್ರಮ : ಅರಿಶಿನ, ಕುಂಕುಮ ರೀತಿಯಲ್ಲಿ ಬಾಮೈದ ಜಮೀನನ್ನ ನನ್ನ ಹೆಂಡತಿಗೆ ಗಿಫ್ಟ್ ನೀಡಿದ್ದ : ಸಿಎಂ ಸ್ಪಷ್ಟನೆ

ವಿಪಕ್ಷನಾಯಕ ಸ್ಥಾನದಿಂದ ‘ರಾಹುಲ್ ಗಾಂಧಿ’ ವಜಾಕ್ಕೆ ‘ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್’ ಆಗ್ರಹ

ವಿಪಕ್ಷನಾಯಕ ಸ್ಥಾನದಿಂದ ‘ರಾಹುಲ್ ಗಾಂಧಿ’ ವಜಾಕ್ಕೆ ‘ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್’ ಆಗ್ರಹ

Share.
Exit mobile version