ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಮತ್ತು ಅಧ್ಯಕ್ಷ ರೋಜರ್ ಬಿನ್ನಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ನಮೋ 1’ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ವಿಜೇತ ಭಾರತೀಯ ಕ್ರಿಕೆಟ್ ತಂಡ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿತು.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಸಿಸಿಐ, “ವಿಜಯಶಾಲಿ ಭಾರತೀಯ ಕ್ರಿಕೆಟ್ ತಂಡವು ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿತು. ಸರ್, ನಿಮ್ಮ ಸ್ಪೂರ್ತಿದಾಯಕ ಮಾತುಗಳಿಗಾಗಿ ಮತ್ತು ಟೀಮ್ ಇಂಡಿಯಾಕ್ಕೆ ನೀವು ನೀಡಿದ ಅಮೂಲ್ಯ ಬೆಂಬಲಕ್ಕಾಗಿ ನಾವು ನಿಮಗೆ ಹೃತ್ಪೂರ್ವಕ ಕೃತಜ್ಞತೆಯನ್ನ ಸಲ್ಲಿಸುತ್ತೇವೆ” ಎಂದಿದ್ದಾರೆ.

 

ಪ್ರಧಾನಿಯೊಂದಿಗಿನ ಸಭೆಯಲ್ಲಿ, ಆಟಗಾರರು ಬಿಸಿಸಿಐ ಲಾಂಛನದ ಮೇಲೆ ಎರಡು ನಕ್ಷತ್ರಗಳನ್ನ ಹೊಂದಿರುವ ವಿಶೇಷ ಜರ್ಸಿಯನ್ನ ಧರಿಸಿದ್ದರು. ಈ ತಾರೆಗಳು ಎರಡು ಟಿ20 ವಿಶ್ವಕಪ್ ಗೆಲುವುಗಳನ್ನು ಪ್ರತಿನಿಧಿಸಿದ್ದಾರೆ. ಜರ್ಸಿಯ ಮೇಲೆ ದಪ್ಪ ಅಕ್ಷರಗಳಲ್ಲಿ ‘ಚಾಂಪಿಯನ್ಸ್’ ಎಂಬ ಪದವನ್ನ ಬರೆಯಲಾಗಿತ್ತು.

 

 

BREAKING : ಪೊಲೀಸರ ಭ್ರಷ್ಟಾಚಾರದಿಂದ ಬೇಸತ್ತಿದ್ದೇನೆ: ರಾಜೀನಾಮೆ ಎಚ್ಚರಿಕೆ ನೀಡಿದ ಶಾಸಕ ಶರಣಗೌಡ ಕಂದಕೂರು

ರಾಮಮಂದಿರ ಇರುವ ಕ್ಷೇತ್ರದಲ್ಲಿ ಪ್ರತಿಪಕ್ಷ ಮೋಸದಿಂದ ಗೆದ್ದಿದೆ : ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

‘ನಿಜವಾದ ನಾಯಕ’ : ಟಿ20 ವಿಶ್ವಕಪ್ ಬದಲು ‘ರೋಹಿತ್, ದ್ರಾವಿಡ್’ ಕೈ ಹಿಡಿದ ಪ್ರಧಾನಿ ಮೋದಿ ; ನೆಟ್ಟಿಗರಿಂದ ಪ್ರಶಂಸೆ

Share.
Exit mobile version