ವಿಜಯಪುರ : ಲೋಕಸಭಾ ಚುನಾವಣೆಯಲ್ಲಿ ಆಸೆ ಆಮಿಷಕ್ಕೆ ಒಳಗಾಗಿ ಪ್ರತಿಪಕ್ಷ ಗೆಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆಗೆ ಹೊಡೆತ ಅಂತ ಭಾವಿಸುವ ಹಾಗಿಲ್ಲ. ನಮ್ಮನ್ನು ಗೆಲ್ಲಿಸಿ ಅಂತ ಹೇಳಿದ್ರು. ರಾಮಮಂದಿರ ಇರುವ ಕ್ಷೇತ್ರದಲ್ಲಿ ಪ್ರತಿಪಕ್ಷ ಮೋಸದಿಂದ ಗೆದ್ದಿದೆ. ಇದು ಮೋಸ ಅಲ್ವೆ, ಈಗ ಏನು ಕೊಟ್ಟಿದ್ದಾರೆ ಎಂದು ಉಡುಪಿ ಪೇಜಾವರದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಇಂದು ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಯಾರೋ ಮಾಡಿದ್ರೆ ಮೋಸ ರಾಜಕೀಯ ಪಕ್ಷ ಮಾಡಿದ್ರೆ ಮೋಸ ಅಲ್ವೆ. ಸರ್ಕಾರ ಬಂದರೆ ಕೊಡ್ತೀವಿ ಅಂದಿದ್ರೋ, ಗೆಲ್ಲಿಸಿದ್ರೆ ಕೊಡ್ತೀವಿ ಅಂದಿದ್ರೋ ನೀವೇ ಗಮನಿಸಿ ಎಂದರು. ಇನ್ನು ಸಿಎಂ ಡಿಸಿಎಂ ಹುದ್ದೆ ಬೇಡಿಕೆ ವಿಚಾರವಾಗಿ, ನಿಯಮದ ವಿರುದ್ಧ ನಾವು ಹೋಗಲ್ಲ. ಡಿಸಿಎಂ ಹುದ್ದೆ ಬ್ರಾಹ್ಮಣರಿಗೆ ಕೊಡಿ ಎಂದು ನಾವು ಕೇಳಲ್ಲ. ಸಂವಿಧಾನಬದ್ಧವಾಗಿ ಪ್ರಸ್ತಾಪ ಇರಬೇಕು. ಜಾತಿವಾರು ಡಿಸಿಎಂ ಹುದ್ದೆ ಸ್ವಾಮೀಜಿಗಳ ಬೇಡಿಕೆಗೆ ಪರೋಕ್ಷವಾಗಿ ಪೇಜಾವರ ಶ್ರೀ ವಿರೋಧಿಸಿದರು.

ಹಿಂದು ಧರ್ಮದ ಬಗ್ಗೆ ರಾಹುಲ್ ಗಾಂಧಿ ಅವಹೇಳನ ವಿಚಾರವಾಗಿ ಸಹಿಷ್ಣುರಾಗಿರುವವರನ್ನು ಕೆಣಕುವುದು ಕೆಲವರಿಗೆ ಚಾಳಿ ಇದೆ. ಸಹಿಷ್ಣರನ್ನು ಕೆಣಕಿ ತಮ್ಮ ಬೇಳೆ ಬೇಯಿಸಿಕೊಳ್ತಾರೆ. ಪಂಗಡ ಪಂಗಡ ಮಧ್ಯೆ ಬೆಂಕಿ ಹಚ್ಚುವುದು ಸರಿಯಲ್ಲ. ಬೇಜವಾಬ್ದಾರಿ ಹೇಳಿಕೆ ಕೊಡುವುದು ಸರಿಯಲ್ಲ. ಸಮಾಜ ಇಂತಹವರಿಂದ ದೂರ ಇರಬೇಕು ಎಂದು ರಾಹುಲ್ ಗಾಂಧಿ ಹೇಳಿಕೆಗೆ ಪೇಜಾವರ ಶ್ರೀ ವಿರೋಧ ವ್ಯಕ್ತಪಡಿಸಿದರು.

ರಾಮಮಂದಿರದ ಮೇಲ್ಛಾವಣಿ ಕೆಲಸ ಇನ್ನೂ ಆಗಬೇಕಿದೆ

ರಾಮಮಂದಿರ ಉದ್ಘಾಟನೆ ತರಾತುರಿಯಲ್ಲಿ ಮಾಡಿಲ್ಲ, ಮೇಲ್ಛಾವಣಿ ಇನ್ನೂ ಆಗಬೇಕಿದೆ, ಇನ್ನೊಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ರಾಮಮಂದಿರ ಆಗಲಿಕೆ ಸಮಯ ಬೇಕಾಗುತ್ತದೆ ಎಂದು ಅವರಿಗೆ ಸ್ಪಷ್ಟನೇ ನೀಡಿದrರು.

Share.
Exit mobile version