ಶಿವಮೊಗ್ಗ: ರಾಹುಲ್ ಗಾಂಧಿ ಅವರು ಹಿಂದೂಗಳ ಬಗ್ಗೆ ನೀಡಿರುವಂತ ಹೇಳಿಕೆ ಖಂಡನೀಯ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಹಿಂದೂಗಳ ಮೌಲ್ಯವನ್ನು ಎತ್ತಿ ಹಿಡಿಯಬೇಕು. ಇಲ್ಲವಾದಲ್ಲಿ ಅವರನ್ನು ರಾಷ್ಟ್ರಪತಿಗಳು ವಿಪಕ್ಷನಾಯಕನ ಸ್ಥಾನದಿಂದ ವಜಾಗೊಳಿಸುವಂತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಆಗ್ರಹಿಸಿದ್ದಾರೆ.

ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಹಿಂದೂಗಳ ಬಗ್ಗೆ ನೀಡಿದಂತ ಹೇಳಿಕೆಯನ್ನು ಖಂಡಿಸಿ, ಸಾಗರ ತಾಲ್ಲೂಕು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಕಚೇರಿಯಿಂದ ಜಾಥಾ ಮೂಲಕ ಎಸಿ ಕಚೇರಿಗೆ ತೆರಳಿದಂತ ಬಿಜೆಪಿ ಮುಖಂಡರು, ರಾಹುಲ್ ಗಾಂಧಿಯವರನ್ನು ವಿಪಕ್ಷ ನಾಯಕ ಸ್ಥಾನದಿಂದ ವಜಾಗೊಳಿಸುವಂತ ಮನವಿಯನ್ನು ನೀಡಿದರು.

ಬಿಜೆಪಿ ಸಾಗರ ಉಪವಿಭಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಏನಿದೆ?

ನಿನ್ನೆ ಸಂಸತ್ತಿನಲ್ಲಿ ಭಾಷಣ ಮಾಡುವ ವೇಳೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹಿಂದೂಗಳು ಹಿಂಸೆಯನ್ನು ಹರಡುವವರು ಮತ್ತು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವವರು ಎಂದು ಹೇಳಿಕೆ ನೀಡಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ಅತ್ಯಂತ ನೋವಿನ ಸಂಗತಿಯಾಗಿರುತ್ತದೆ. ಇದನ್ನು ಭಾರತೀಯ ಜನತಾ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಇಂತಹ ಕ್ಷುಲ್ಲಕ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡುತ್ತಿರುವ ಮತ್ತು ಸಾಂವಿಧಾನಿಕ ಹುದ್ದೆಯಲ್ಲಿದ್ದೂ ಕೂಡ ಈ ರೀತಿಯ ಬಾಲೀಷ ಹೇಳಿಕೆ ನೀಡುತ್ತಿರುವ ರಾಹುಲ್ ಗಾಂಧಿಯವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಬೇಕು ಅಂತ ಉಪವಿಭಾಗೀಯ ಅಧಿಕಾರಿಯ ಮೂಲಕ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಲಾಗಿದೆ.

ಈ ಬಳಿಕ ಮಾತನಾಡಿದಂತ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಅವರು, ರಾಹುಲ್ ಗಾಂಧಿಯವರು ಹಿಂದೂಗಳು ದ್ವೇಷವನ್ನು ಪ್ರೇರೇಪಿಸುತ್ತಿದ್ದಾರೆ. ಹಿಂಸೆಗೆ ಪ್ರಚೋದನೆ ಕೊಡ್ತಾ ಇದ್ದಾರೆ ಅಂತ ಹೇಳಿದ್ದಾರೆ. ಇದು ಪೂರ್ವಾಗ್ರಹ ಪೀಡಿತವಾದಂತ ಹೇಳಿಕೆಯಾಗಿದೆ. ಇದು ವಿರೋಧ ಪಕ್ಷಕ್ಕೆ, ಕಾಂಗ್ರೆಸ್ ಪಕ್ಷಕ್ಕೆ, ರಾಹುಲ್ ಗಾಂಧಿಯವರಿಗೆ ಗೌರವ ತರುವಂತ ವಿಚಾರವಲ್ಲ ಎಂದರು.

ಹಿಂದೂಗಳು ಇಂತಹ ಹೇಳಿಕೆಯಿಂದ ನೊಂದು ಮುಂಬರುವಂತ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಅದಕ್ಕೂ ಮುನ್ನ ತಮ್ಮ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಇಲ್ಲವೇ ವಿಪಕ್ಷ ನಾಯಕ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಅಂತ ಆಗ್ರಹಿಸಿದರು.

ಸಾಗರ ನಗರಸಭೆ ಆಯುಕ್ತರಿಗೆ ಅಭಿನಂದನೆ

ಸಾಗರನ ನಗರಸಭೆಯಿಂದ ಮೂಲೆ ಸೈಟುಗಳನ್ನು ಹರಾಜಿನ ಮೂಲಕ ಖರೀದಿಸಿದ್ದಂತ ಜನರಿಗೆ ಮಂಜೂರಾತಿ ಪತ್ರ, ಹಕ್ಕು ಪತ್ರವನ್ನು ಒಂದು ವರ್ಷಗಳೇ ಕಳೆದಿದ್ದರು ನೀಡಿರಲಿಲ್ಲ. ಈ ಬಗ್ಗೆ ಸಾಗರ ತಾಲ್ಲೂಕು ಬಿಜೆಪಿ ಘಟಕ ನಗರಸಭೆ ಆಯುಕ್ತ ನಾಗಪ್ಪ ಅವರಿಗೆ ಮನವಿ ಮಾಡಿ, ಆದಷ್ಟು ಬೇಗ ಕ್ರಮವಹಿಸುವಂತೆ ಕೋರಿದ್ದರು.

ಈ ಕೋರಿಕೆಯ ನಂತ್ರ ನಗರಸಭೆ ಆಯುಕ್ತ ನಾಗಪ್ಪ ಅವರು ಒಂದೇ ತಿಂಗಳಲ್ಲಿ ಮೂಲೆ ಸೈಟುಗಳಿಗೆ ಮಂಜೂರಾತಿ ಪತ್ರ, ಹಕ್ಕು ಪತ್ರ ನೀಡುವ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಆದೇಶದ ಮೂಲಕ ಕಾರ್ಯರೂಪಕ್ಕೆ ತಂದಿದ್ದರು. ಅಲ್ಲದೇ ಕೆಲವೇ ದಿನಗಳಲ್ಲಿ ಮೂಲೆ ಸೈಟುಗಳನ್ನು ಟೆಂಡರ್ ನಲ್ಲಿ ಕೂಗಿ ಖರೀದಿಸಿದ್ದಂತ ಜನರಿಗೆ ಹಕ್ಕು ಪತ್ರ ನೀಡುವುದಾಗಿಯೂ ಹೇಳಿದ್ದರು.

ಇಂತಹ ತ್ವರಿತ ಕ್ರಮ ಕೈಗೊಂಡಂತ ಸಾಗರ ನಗರಸಭೆ ಆಯುಕ್ತ ನಾಗಪ್ಪ ಅವರಿಗೆ ಸಾಗರ ತಾಲ್ಲೂಕು ಬಿಜೆಪಿ ಘಟಕದಿಂದ ಹಾರ ಹಾಕಿ, ಶಾಲು ಹೊದಿಸಿ ನಗಸಭೆಯ ಆವರಣದಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಸಾಗರ ನಗರ ಬಿಜೆಪಿ ಅಧ್ಯಕ್ಷರಾದಂತ ಗಣೇಶ್ ಪ್ರಸಾದ್, ನಗರ ಕಾರ್ಯದರ್ಶಿ ಸತೀಶ್ ಮೊಗವೀರ, ಮಾಜಿ ನಗರ ಸಭೆ ಅಧ್ಯಕ್ಷೆ ಮಧು ಶಿವಾನಂದ್, ನಗರಸಭಾ ಸದಸ್ಯರಾದಂತ ಲಿಂಗರಾಜ್, ಪ್ರೇಮಾ ಸಿಂಗ್, ಮಾಜಿ ನಗರಸಭೆ ಉಪಾಧ್ಯಕ್ಷರು ವಿ.ಮಹೇಶ್, ನಗರ ಬಿಜೆಪಿ ಕಾರ್ಯದರ್ಶಿ ಸಂತೋಷ್ ರಾಯಲ್, ಸಂತೋಷ್ ಸೇಟ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

ಹಿಂದೂ ವಿರೋಧಿ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ ರಾಹುಲ್ ಗಾಂಧಿ

ಮುಡಾದಲ್ಲಿ 4,000 ಕೋಟಿ ರೂ. ಗುಳುಂ ಮಾಡಿದ ʻಗೋಲ್ಮಾಲ್‌ CMʼ : ಆರ್.‌ ಅಶೋಕ್‌ ಗಂಭೀರ ಆರೋಪ

Share.
Exit mobile version