ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವುದು ನಮ್ಮ ಹೊಣೆಯಾಗಿದೆ. ಸಮಯ ಬಂದರೆ ನ್ಯಾಯದ ತಕ್ಕಡಿ ಹಿಡಿದು ಹೋಗುತ್ತೇನೆ ಎಂದು ಒಕ್ಕಲಿಗರ ಸಮುದಾಯಕ್ಕೆ ಸೇರಿದ ಶಾಸಕ ಸಿ.ಟಿ.ರವಿ ಭರವಸೆ ನೀಡಿದ್ದಾರೆ. .
ನಗರದಲ್ಲಿ ಮಾತನಾಡಿದ ಅವರು, ಸರ್ಕಾರದ ಮೀಸಲಾತಿ ದುರ್ಬಲ ವರ್ಗಗಳಿಗೆ ಸಿಗಬೇಕು. ಕಾಲಕಾಲಕ್ಕೆ ಮೀಸಲಾತಿ ಹಂಚಿಕೆ ಮಾರ್ಪಾಡು ಆಗಬೇಕು. ಮೀಸಲಾತಿ ನ್ಯಾಯಯುತವಾಗಿ ಪರಿಶೀಲನೆ ಮಾಡಬೇಕು. ನ್ಯಾಯಸಿಗದ ವರ್ಗಕ್ಕೆ ಮೀಸಲಾತಿ ನೀಡುವ ಕೆಲಸ ಆಗಬೇಕು ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಮೀಸಲಾತಿ ಬಹಳ ಸೂಕ್ಷ್ಮ ವಿಚಾರವಾಗಿದೆ. ರಾಜಕಾರಣದಲ್ಲಿ ಸಾಂದರ್ಭಿಕವಾಗಿ ಹೇಳುವುದು ತಪ್ಪಾಗುತ್ತದೆ. ಮೀಸಲಾತಿ ದುರ್ಬಲರ ಪರವಾಗಿ ಇರಬೇಕು. ನಾನು ನಮ್ಮ ಸಮುದಾಯದ ನಿರ್ಮಲಾನಂದ ಸ್ವಾಮೀಜಿ ಪರವಾಗಿಯೇ ಹೇಳಬೇಕು, ಇಲ್ಲ ಅಂದರೆ ಅದು ತಪ್ಪಾಗುತ್ತದೆ. ಆ ವಿಚಾರವೇ ಬೇಡ ಬಿಡಿ ಎಂದರು.