ಚೀನಾದಲ್ಲಿ ಕೊರೊನಾ ರಣಾರ್ಭಟ ಬೆನ್ನಲ್ಲೆ ಇದೀಗ ರಾಜ್ಯದಲ್ಲು ಕೊರೊನಾ ಮಾರ್ಗಸೂಚಿ ಅನುಸರಿಸಲು ಮುಂದಾಗಿದ್ದು, ಈ ಬೆನ್ನಲ್ಲೆ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ವ್ಯಾಕ್ಸಿನೇಷನ್ಗೆ ಡಿಮ್ಯಾಂಡ್ ಶುರುವಾಗಿದೆ.
BREAKING NEWS : ರಾಜ್ಯದಲ್ಲಿ ಸದ್ಯಕ್ಕೆ ‘ಮಾಸ್ಕ್’ ಕಡ್ಡಾಯ ಇಲ್ಲ, ಆದರೆ ಜಾಗೃತಿ ವಹಿಸಿ : ಸಚಿವ ಸುಧಾಕರ್
ಕರ್ನಾಟಕದಲ್ಲಿ ಮತ್ತೊಮ್ಮೆ ಕೊರೊನಾ ಭಯ ಕಾಡುತ್ತಿದ್ದು, ಮಹಾಮಾರಿ ವಿರುದ್ಧ ಹೋರಾಟ ಮಾಡುವ ಲಸಿಕೆ ಕೊರೊನಾಗೆ ರಾಮಬಾಣ ಎಂಬುದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳೋದಕ್ಕೆ ಜನರು ಮುಂದಾಗಿದ್ದಾರೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಕೊರತೆ ಉಂಟಾಗಿದ್ದು, ಲಸಿಕೆ ಹಾಕಿಸೋದಕ್ಕೆ ಬರುತ್ತಿದ್ದ ಜನರು ಮನೆಗೆ ವಾಪಾಸ್ ಕಳುಹಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ.ಆದಷ್ಟೂ ಬೇಗ ಲಸಿಕೆ ಲಭ್ಯವಾಗುವಂತೆ ಮಾಡುವುದರ ಬಗ್ಗೆ ಸರ್ಕಾರ ಚಿಂತಿಸಬೇಕಾಗಿದೆ ಎಂದು ಸಾರ್ವಜನಿಕರ ಒತ್ತಯವಾಗಿದೆ
BREAKING NEWS : ರಾಜ್ಯದಲ್ಲಿ ಸದ್ಯಕ್ಕೆ ‘ಮಾಸ್ಕ್’ ಕಡ್ಡಾಯ ಇಲ್ಲ, ಆದರೆ ಜಾಗೃತಿ ವಹಿಸಿ : ಸಚಿವ ಸುಧಾಕರ್