ನವದೆಹಲಿ: ಪಟಾಕಿ ಮೇಲೆ ವಿಧಿಸಿದ್ದ ನಿಷೇಧವನ್ನು ಲೆಕ್ಕಿಸದೇ ದೆಹಲಿಯಲ್ಲಿ ಜನರು ಪಟಾಕಿಗಳನ್ನು ಸಿಡಿಸಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದು ಪ್ರತಿ ಜೀವಗಳಿಗೂ ಉಸಿರಾಡಲು ಅವಶ್ಯವಾದ ಶುದ್ಧ ಗಾಳಿಯನ್ನೇ ಕಲುಶಿತಗೊಳಿಸಿದೆ.
ದೀಪಾವಳಿಯಂದು ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಸಿಡಿಸಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 200 ರೂ. ದಂಡ ವಿಧಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಕಳೆದ ವಾರ ಹೇಳಿದ್ದರು.
ಕಾನೂನು ಪ್ರತಿಬಂಧಕ ಜಾರಿಯಲ್ಲಿದ್ದರೂ, ದಕ್ಷಿಣ ಮತ್ತು ವಾಯುವ್ಯ ದೆಹಲಿ ಸೇರಿದಂತೆ ನಗರದ ಅನೇಕ ಭಾಗಗಳಲ್ಲಿ ಜನರು ಮುಸ್ಸಂಜೆಯ ಹೊತ್ತಿಗೆ ಪಟಾಕಿಗಳನ್ನು ಸಿಡಿಸಲು ಪ್ರಾರಂಭಿಸಿದರು. ದೀಪಾವಳಿಯಂದು ಪಟಾಕಿ ಸಿಡಿಸುವುದು ಹಳೆಯ ಸಂಪ್ರದಾಯವಾಗಿದೆ. ಆದರೆ, ದೆಹಲಿಯ ಅಧಿಕಾರಿಗಳು ಪರಿಸರ ಕಾಳಜಿ ಮತ್ತು ಆರೋಗ್ಯದ ಅಪಾಯಗಳನ್ನು ಪರಿಗಣಿಸಿ, ಪಟಾಕಿ ಸಿಡಿಸುವುದನ್ನು ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಂಡರು. ಆದ್ರೆ, ಇದು ಯಾವುದೇ ಪ್ರಯೋಜನ ನೀಡಿಲ್ಲ.
ಪಟಾಕಿ ಸಿಡಿತದಿಂದ ದೆಹಲಿಯ ಗಾಳಿಯ ಗುಣಮಟ್ಟ ಸೋಮವಾರ ತುಂಬಾ ಕಳಪೆ ಯಾಗಿದೆ. ಆದಾಗ್ಯೂ, 24-ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (air quality index-AQI) 312ಕ್ಕೇರಿದೆ. 2018 ರಲ್ಲಿ ದೀಪಾವಳಿಯಂದು ನಗರದಲ್ಲಿ AQI 281ರಷ್ಟಾಗಿತ್ತು. ಈ ವರ್ಷ ಮತ್ತೆ ಪಟಾಕಿ ಸಿಡಿತದ ಪ್ರಮಾಣ ಹೆಚ್ಚಾದರೆ ಗಾಳಿಯ ಗುಣಮಟ್ಟ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
BIGG NEWS : ಕಿತ್ತೂರು ಬಳಿ ಕೈಗಾರಿಕೆ ಟೌನ್ ಶಿಪ್ ನಿರ್ಮಾಣ, 50 ಸಾವಿರ ಉದ್ಯೋಗ ಸೃಷ್ಟಿ : ಸಿಎಂ ಬೊಮ್ಮಾಯಿ ಘೋಷಣೆ
BIGG NEWS : ಕಿತ್ತೂರು ಬಳಿ ಕೈಗಾರಿಕೆ ಟೌನ್ ಶಿಪ್ ನಿರ್ಮಾಣ, 50 ಸಾವಿರ ಉದ್ಯೋಗ ಸೃಷ್ಟಿ : ಸಿಎಂ ಬೊಮ್ಮಾಯಿ ಘೋಷಣೆ