ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಒಂದು ದೇಶ-ಒಂದು ರಸಗೊಬ್ಬರʼ ಯೋಜನೆಗೆ ಚಾಲನೆ ನೀಡಿದ್ದು, ಭಾರತ್ ಯೂರಿಯಾ, ಭಾರತ್ ಡಿಎಪಿ, ಭಾರತ್ ಎಂಓಪಿ, ಭಾರತ್ ಎನ್ಪಿಕೆ ರಸಗೊಬ್ಬರವನ್ನು ಲೋಕಾರ್ಪಣೆ ಮಾಡಿದರು.
ದೆಹಲಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ, ಕಿಸಾನ್ ಸಮ್ಮಾನ್ ಯೋಜನೆಯಡಿ 12ನೇ ಕಂತಿನ ಹಣವನ್ನು ರೈತರಿಗೆ ಬಿಡುಗಡೆ ಮಾಡಿದರು. ಈ ಮೂಲಕ 16,000 ಕೋಟಿ ರೂ. ಹಣ 8 ಲಕ್ಷ ರೈತರ ಖಾತೆಗಳಿಗೆ ಜಮೆಯಾಗಿದೆ.
ಇದೇ ಸಂದರ್ಭದಲ್ಲಿ ಮೋದಿ ಅವರು ಪ್ರಧಾನ ಮಂತ್ರಿ ಭಾರತೀಯ ಜನ ಉರ್ವರಕ್ ಪರಿಯೋಜನಾ-ಒಂದು ದೇಶ-ಒಂದು ರಸಗೊಬ್ಬರಕ್ಕೆ ಚಾಲನೆ ನೀಡಿದರು. ಈ ಯೋಜನೆಯಡಿಯಲ್ಲಿ ರೈತರಿಗೆ ಅಗ್ಗದ ಮತ್ತು ಉತ್ತಮ ಗುಣಮಟ್ಟದ ರಸಗೊಬ್ಬರವನ್ನು ಒದಗಿಸಲಾಗುವುದು ಎಂದು ಮೋದಿ ಅವರು ಹೇಳಿದ್ದಾರೆ.
Delhi | Prime Minister Narendra Modi launches PM Bhartiya Jan Urvarak Pariyojana-One Nation One Fertilizer pic.twitter.com/Jr4uR6vksB
— ANI (@ANI) October 17, 2022
#WATCH via Multimedia | Live: PM Modi inaugurates PM-KISAN Samman Sammelan 2022https://t.co/Q0FY9EdvKB
— ANI (@ANI) October 17, 2022
ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು 600 ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳಿಗೆ ಚಾಲನೆ ನೀಡಿದರು.
BIGG BREAKING NEWS : ಮಳಲಿ ಮಸೀದಿ ವಿವಾದ : ನವೆಂಬರ್ 9 ಕ್ಕೆ ಆದೇಶ ಕಾಯ್ದಿರಿಸಿದ ಮಂಗಳೂರು ಕೋರ್ಟ್