ನವದೆಹಲಿ: ನಿಮ್ಮ OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕರೆ/ಎಸ್ಎಂಎಸ್/ಇಮೇಲ್ ಮೂಲಕ ಒನ್-ಟೈಮ್-ಪಾಸ್ವರ್ಡ್ (OTP) ಕೇಳುವ ಮೂಲಕ ನಡೆಸುವ ಸೈಬರ್ ವಂಚನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸೈಬರ್ ಕ್ರೈಮ್ ಅಧಿಕಾರಿಗಳು ಯಾವಾಗಲೂ ಈ ಎಚ್ಚರಿಕೆ ನೀಡುತ್ತಿರುತ್ತಾರೆ. ಆದಾಗ್ಯೂ, OTP ಅನ್ನು ಹಂಚಿಕೊಳ್ಳದೆ ನೀವು ಸಿಕ್ಕಿಬೀಳಬಹುದು ಇಂತಹ ಜಾಲಕ್ಕೆ ಸಿಕ್ಕಿಬೀಳಬಹುದು.
ಹೌದು, ಇತ್ತೀಚೆಗೆ ನಡೆದ ಸೈಬರ್ ವಂಚನೆಯಲ್ಲಿ ದೆಹಲಿಯ ವ್ಯಕ್ತಿಯೊಬ್ಬರು ಕೇವಲ ಆತನಿಗೆ ಬಂದ ಮಿಸ್ಡ್ ಕಾಲ್ ಮೂಲಕ 50 ಲಕ್ಷ ರೂ. ಕಳದುಕೊಂದಿದ್ದಾರೆ. ಈತ ವಂಚಕರಿಗೆ ಯಾವುದೇ OTPಯ ಬಗ್ಗೆ ಮಾಹಿತಿ ನೀಡದಿದ್ರೂ, ಅವರ ಹಲವು ಖಾತೆಗಳಿಂದ ಹಲವಾರು ವಹಿವಾಟು ನಡೆಸಿ, 50 ಲಕ್ಷ ರೂ. ವಂಚಿಸಿದ್ದಾರೆ.
ದಕ್ಷಿಣ ದೆಹಲಿ ಮೂಲದ ಭದ್ರತಾ ಸೇವೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಸೈಬರ್ ವಂಚನೆಯಿಂದ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ವರದಿಯ ಪ್ರಕಾರ, ಸಂತ್ರಸ್ತನಿಗೆ ಕೆಲವು ದಿನಗಳ ಹಿಂದೆ ರಾತ್ರಿ 7 ರಿಂದ 8.45 ರ ನಡುವೆ ಪದೇ ಪದೇ ಮಿಸ್ಡ್ ಕಾಲ್ಗಳು ಬಂದಿವೆ. ಆತ ಯಾವುದೇ ಕಾಲ್ ರಿಸೀವ್ ಮಾಡಲು ನಿರ್ಲಕ್ಷಿಸಿದ್ದಾನೆ. ಆದ್ರೂ, ಪದೇ ಪದೇ ಕರೆ ಬಂದ ಕಾರಣ ಒಮ್ಮೆ ಕಾಲ್ ರಿಸೀವ್ ಮಾಡಿದ್ದಾರೆ. ಈ ವೇಳೆ, ಆ ಕಡೆಯಿಂದ ಯಾರೂ ಮಾತಾಡಿಲ್ಲ. ಸ್ವಲ್ಪ ಸಮಯದ ನಂತರ, ಸಂತ್ರಸ್ತನಿಗೆ ಸಂದೇಶಗಳು ಪ್ರಾರಂಭಿಸಿದವು. ಬಂದ ಸಂದೇಶಗಳನ್ನು ಪರಿಶೀಲಿಸಿದಾಗ, ತನ್ನ ಖಾತೆಯಿಂದ 50 ಲಕ್ಷ ರೂ. ಖಾಲಿಯಾಗಿರುವುದನ್ನು ಕಂಡು ಆಘಾತಕ್ಕೊಳಗಾದರು.
ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಜಾರ್ಖಂಡ್ನ ಜಮ್ತಾರಾದಲ್ಲಿ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ತಮ್ಮ ಖಾತೆಯಲ್ಲಿನ ಎಲ್ಲಾ ವಂಚನೆಯ ಹಣವನ್ನು ಸ್ವೀಕರಿಸಿದವರು ತಮ್ಮ ಖಾತೆಗಳನ್ನು ಕಮಿಷನ್ಗಾಗಿ ವಂಚಕರಿಗೆ ಬಾಡಿಗೆಗೆ ನೀಡಿದವರು ಎಂದು ವರದಿಗಳು ಸೂಚಿಸುತ್ತವೆ.
BIG NEWS : ʻಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿʼ ಎಂದ ಕೈ ನಾಯಕ ಅರೆಸ್ಟ್
BIGG NEWS : 5 ವರ್ಷದ ಬಾಲಕಿಗೆ ‘ಝಿಕಾ ವೈರಸ್’ ಪತ್ತೆ : ರಾಯಚೂರಿನಲ್ಲಿ ‘ಹೈ ಅಲರ್ಟ್’
BIG NEWS : ʻಸಂವಿಧಾನ ಉಳಿಸಲು ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿʼ ಎಂದ ಕೈ ನಾಯಕ ಅರೆಸ್ಟ್
BREAKING NEWS: ಬಾಗಲಕೋಟೆಯಲ್ಲಿ ತಂದೆಯ ಭೀಕರ ಹತ್ಯೆ: ದೇಹವನ್ನು 30 ಪೀಸ್ ಮಾಡಿ ಬಾವಿಗೆ ಎಸೆದ ಪಾಪಿ ಮಗ