ನವದೆಹಲಿ : ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಅಕ್ಟೋಬರ್ನಲ್ಲಿ 900 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಪ್ರಕರಣಗಳ ಸಂಖ್ಯೆ 1876ಕ್ಕೆ ತಲುಪಿದೆ.
BREAKING: ‘ಪಟಾಕಿ ಫ್ರೀ’ಯಾಗಿ ಕೊಡದಿದ್ದಕ್ಕೆ ಅಂಗಡಿ ಮಾಲೀಕನನ್ನು ಥಳಿಸಿದ ‘ಬಿಜೆಪಿ ಪುರಸಭೆ ಸದಸ್ಯೆ ಪತಿ’
ನಾಗರಿಕ ವರದಿಯ ಪ್ರಕಾರ, ಅಕ್ಟೋಬರ್ 12 ರವರೆಗೆ ಡೆಂಗ್ಯೂ ಸೋಂಕಿನ ಸಂಖ್ಯೆ 1,572 ರಷ್ಟಿತ್ತು. ಆದರೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಇದರ ಜೊತೆಗೆ ಮಲೇರಿಯಾ, ಚಿಕನ್ ಗುನ್ಯಾ ಕೇಸ್ ಗಳು ಕಾಣಿಸಿಕೊಂಡಿವೆ. ಈ ವರ್ಷ 194 ಮಲೇರಿಯಾ ಮತ್ತು 38 ಚಿಕನ್ ಗುನ್ಯಾ ಪ್ರಕರಣಗಳು ದಾಖಲಾಗಿವೆ ಎನ್ನಲಾಗುತ್ತಿದೆ.
ಕೇವಲ ಒಂದು ವಾರದಲ್ಲಿ ಡೆಂಗ್ಯೂ ಕೇಸ್ ಗಳು 300 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿದ್ದು, ಅಕ್ಟೋಬರ್ 19 ರವರೆಗೆ ಪ್ರಕರಣಗಳ ಸಂಖ್ಯೆ 1,876 ಕ್ಕೆ ತಲುಪಿದೆ. ಇದರಲ್ಲಿ 693 ಸೆಪ್ಟೆಂಬರ್ನಲ್ಲಿ ವರದಿಯಾಗಿದೆ.
ಇದು 2017 ರಿಂದ ಜನವರಿ 1 ರಿಂದ ಅಕ್ಟೋಬರ್ 19 ರ ಅವಧಿಯಲ್ಲಿ ದಾಖಲಾದ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳಾಗಿವೆ ಎಂದು ವರದಿ ಹೇಳಿದೆ.
ಈ ವರ್ಷ ಈ ರೋಗದಿಂದ ಯಾವುದೇ ಸಾವು ಸಂಭವಿಸಿಲ್ಲ. ಕಳೆದ ವರ್ಷ ಡೆಂಗ್ಯೂ 23 ಮಂದಿಯನ್ನು ಬಲಿ ತೆಗೆದುಕೊಂಡಿತ್ತು.