ದೆಹಲಿ: ನಿಲ್ಲದ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 15 ದಿನಗಳಲ್ಲಿ ಸೋಂಕಿನಿಂದ ಆಸ್ಪತ್ರೆ ದಾಖಲಾಗುತ್ತಿರುವವ ಸಂಖ್ಯೆ ಶೇ 60ರಷ್ಟು ಹೆಚ್ಚಾಗಿದ್ದು ಕೃತಕ ಆಮ್ಲಜನಕದ ಸಹಾಯದಿಂದ ಉಸಿರಾಡುತ್ತಿರವವರ ಸಂಖ್ಯೆ 2 ಪಟ್ಟು ಏರಿಕೆಗೊಂಡಿದೆ.
ದೆಹಲಿಯಲ್ಲಿ ಮಂಗಳವಾರ 917 ಕೊರೊನಾ ಪ್ರಕರಣ ದೃಢಪಟ್ಟಿದ್ದು, ಅದರಲ್ಲಿ 563 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲೂ 202 ಮಂದಿ ಐಸಿಯೂ ನಲ್ಲಿದ್ದಾರೆ. ಮೂವರು ಮೃತಪಟ್ಟಿದ್ದಾರೆ.
ಆ.9ರಂದು 2495 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೇವಲ ಶೇ 20ರಷ್ಟು ಸೋಂಕಿತರು ಮಾತ್ರವೇ ಆಸ್ಪತ್ರೆಗತೆ ದಾಖಲಾಗಿದ್ದರು. ಅದೇ ರೀತಿ ಆ. 2ರಂದು 1506ಪ್ರಕರಣ ಪತ್ತೆಯಾಗಿದ್ದು. ಅದರಲ್ಲೂ ಶೇ 20 ಸೋಂಕಿತರು ಆಸ್ಪತ್ರೆಗೆ ಸೇರಿದ್ದಾರೆ.
ಸೋಂಕು ಪತ್ತೆಯಾಗ್ತಿರುವ ಪ್ರಕರಣದಲ್ಲಿ ಶೇ. 60 ಸೋಂಕಿತರು ಆಸ್ಪತ್ರೆಗೆ ಸೇರಿದ್ದಾರೆ , ಆ.1ಕ್ಕೆ ಶೇ. 11ರಷ್ಟಿದ್ದ ಕೊರೊನಾ ಪಾಸಿಟಿವಿಟಿ ಪ್ರಮಾಣ ಇದೀಗ ಶೇ 19.2ಕ್ಕೆ ಏರಿಕೆಗೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ