ನವದೆಹಲಿ: ಜುಲೈ 17 ರಂದು ನಡೆಯಲಿರುವ 2022 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಹಲವಾರು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (National Eligibility cum Entrance Test-Undergraduate-NEET-UG) ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಪ್ರಾರಂಭಿಸಿತು. ಅಲ್ಲದೇ ಅರ್ಜಿಯ ವಿಚಾರಣೆ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಅರ್ಜಿಯನ್ನು ವಜಾಗೊಳಿಸಿದೆ.
Breaking news: ಮಾಲ್ಡೀವ್ಸ್ ತೊರೆದು ಸಿಂಗಾಪುರಕ್ಕೆ ಹಾರಿದ ಲಂಕಾ ಅಧ್ಯಕ್ಷ ʻಗೊಟಾಬಯ ರಾಜಪಕ್ಸʼ: ವರದಿ
ನೀಟ್-ಯುಜಿ 2022 ( NEET UG exam ) ಅನ್ನು ಮುಂದೂಡುವ ಮನವಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್, 15 ವಿದ್ಯಾರ್ಥಿಗಳು ಪರೀಕ್ಷೆಯನ್ನು ಮರುನಿಗದಿಗೊಳಿಸಲು ಹೇಗೆ ಪ್ರಯತ್ನಿಸಬಹುದು ಎಂಬುದನ್ನು ಕಾದು ನೋಡಬೇಕಿದೆ.
Delhi High Court dismisses a petition filed by 15 medical aspirants seeking direction to the Centre, National Testing Agency (NTA) and others to postpone the National Eligibility cum Entrance Test-Undergraduate (NEET-UG) scheduled to be held on July 17. pic.twitter.com/AAbPcGFWLh
— ANI (@ANI) July 14, 2022
ಒಟ್ಟಾರೆಯಾಗಿ ಜುಲೈ 17 ರಂದು ನಡೆಯಬೇಕಿದ್ದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (ನೀಟ್-ಯುಜಿ) ಮುಂದೂಡಲು ಕೇಂದ್ರ ಸರ್ಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮತ್ತು ಇತರರಿಗೆ ನಿರ್ದೇಶನ ನೀಡುವಂತೆ ಕೋರಿ 15 ವೈದ್ಯಕೀಯ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.