ಸಮಸ್ತಿಪುರ : ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೆಲ ಕಾಮುಕ ದುಷ್ಕರ್ಮಿಗಳು, 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಜನನಾಂಗ, ಸ್ತನ ಮತ್ತು ನಾಲಿಗೆಯನ್ನ ಕತ್ತರಿಸಿದ್ದಾರೆ. ನಂತ್ರ ಆಕೆ ಸತ್ತಿದ್ದಾಳೆ ಎಂದು ಭಾವಿಸಿ ತೋಟಕ್ಕೆ ಎಸೆದು ಹೊರಟು ಹೋಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣವು ಸಮಸ್ತಿಪುರ ಜಿಲ್ಲೆಯ ಚಕ್ಮೆಹ್ಸಿ ಪೊಲೀಸ್ ಠಾಣೆ ಪ್ರದೇಶದಲ್ಲಿದೆ. ನವೆಂಬರ್ 11, 2022 ರಂದು ಕೆಲವು ದುಷ್ಕರ್ಮಿಗಳು ಬಾಲಕಿಯನ್ನ ಮನೆಯಿಂದ ಎತ್ತಿಕೊಂಡು ತಮ್ಮೊಂದಿಗೆ ಕರೆದೊಯ್ದರು ಎಂದು ಕುಟುಂಬ ಹೇಳಿದೆ. ಅದರ ನಂತರ, ಅವರೆಲ್ಲರೂ ಅವಳ ಮೇಲೆ ಅತ್ಯಾಚಾರ ಮಾಡಿದ್ದು, ನಂತ್ರ ಬಾಲಕಿಯನ್ನ ಮನೆಯ ಹತ್ತಿರದ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟ ಹೋಗಿದ್ದಾರೆ. ಸಾಕಷ್ಟು ಹುಡುಕಾಟದ ನಂತ್ರ ಬಾಲಕಿ ತೋಟದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯ ಸಿಪಿಐ(ಎಂಎಲ್) ತಂಡಕ್ಕೆ ಈ ವಿಷಯ ತಿಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಬಾಲಕಿಯ ಸ್ಥಿತಿ ತುಂಬಾ ಗಂಭೀರವಾಗಿದ್ದು, ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಬಾಲಕಿಗೆ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಈ ಕುರಿತು ಸಮಸ್ತಿಪುರ ಎಸ್ಪಿ ಹೃದಯ್ ಕಾಂತ್ ಮಾಹಿತಿ ನೀಡಿದ್ದು, “13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಹೇಳಿಕೆ ಪಡೆಯಲು ಚಕ್ಮೆಹ್ಸಿ ಪೊಲೀಸರನ್ನ ಮುಜಫ್ಫರ್ಪುರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಘಟನೆಯ ಅಪರಾಧಿಗಳನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ.
ಇನ್ನು ಈ ಘಟನೆ ಬೆಳಕಿಗೆ ಬಂದ ನಂತರ, ಸಿಪಿಐ (ಎಂಎಲ್) ತಂಡವು ಸಹ ಗ್ರಾಮಕ್ಕೆ ತಲುಪಿ ಬಾಲಕಿಯ ಕುಟುಂಬವನ್ನ ಭೇಟಿ ಮಾಡಿತು. ಸಿಪಿಐ(ಎಂಎಲ್) ಕಲ್ಯಾಣಪುರ ಬ್ಲಾಕ್ ಕಾರ್ಯದರ್ಶಿ ದಿನೇಶ್ ಕುಮಾರ್ ಮತ್ತು ಪೂಸಾ ಬ್ಲಾಕ್ ಕಾರ್ಯದರ್ಶಿ ಅಮಿತ್ ಕುಮಾರ್ ಅವರು ತಪ್ಪಿತಸ್ಥರನ್ನ ಶಿಕ್ಷಿಸುವುದಾಗಿ ಕುಟುಂಬ ಸದಸ್ಯರಿಗೆ ಭರವಸೆ ನೀಡಿದರು. ಅದೇ ಸಮಯದಲ್ಲಿ, ಬಾಲಕಿಯೊಂದಿಗಿನ ಕ್ರೌರ್ಯದ ಎಲ್ಲಾ ಮಿತಿಗಳನ್ನ ದಾಟಿದ ಅಪರಾಧಿಗಳ ಬಗ್ಗೆ ಈ ಪ್ರದೇಶದಲ್ಲಿ ಸಾಕಷ್ಟು ಕೋಪವಿದೆ. ಘಟನೆ ನಡೆಸಿದ ಅಪರಾಧಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು ಪೊಲೀಸರನ್ನುಒತ್ತಾಯಿಸಿದ್ದಾರೆ.
ತಮಿಳುನಾಡು : ಸೆಪ್ಟಿಕ್ ಟ್ಯಾಂಕ್ ಸ್ವಚ್ಚಗೊಳಿಸುವ ವೇಳೆ ಉಸಿರುಗಟ್ಟಿ ಮೂವರು ಕಾರ್ಮಿಕರು ಸಾವು