ಬೆಂಗಳೂರು: ನಿನ್ನೆಯಷ್ಟೇ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಬಸ್ಸುಗಳ ಮೇಲಿನ ತಂಪಾಕು ಉತ್ಪನ್ನಗಳನ್ನು ಉತ್ತೇಜಿಸುವಂತ ಜಾಹೀರಾತು ತೆರವಿಗೆ ಟಿಪ್ಪಣಿ ಹೊರಡಿಸಿದ್ದರು. ಈ ಬೆನ್ನಲ್ಲೇ ಸಾರಿಗೆ ಬಸ್ಸುಗಳಲ್ಲಿ ಹಾಕಿದ್ದಂತ ಜಾಹೀರಾತು ತೆರವಿಗೆ ಸರ್ಕಾರ ಡೆಡ್ ಲೈನ್ ಫಿಕ್ಸ್ ಮಾಡಿದೆ. ಮುಂದಿನ 15 ದಿನಗಳಲ್ಲಿ ಎಲ್ಲಾ ನಿಗಮದ ಸಾರಿಗೆ ಬಸ್ಸುಗಳ ಮೇಲಿನ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವಂತ ಜಾಹೀರಾತು ತೆರವಿಗೆ ಸರ್ಕಾರ ಆದೇಶ ಹೊರಡಿಸಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಎಲ್ಲಾ ಹಿರಿಯ, ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ / ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಪ್ರಚಾರ ಮಾಡದಂತೆ ಹಾಗೂ ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್ಸುಗಳಲ್ಲಿ /ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದರೆ, ಅವುಗಳನ್ನು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಆ ನಿಗದಿತ ಸಮಯದೊಳಗೆ ತೆರವುಗೊಳಿಸಲು ನಿರ್ದೇಶಿಸಿರುತ್ತಾರೆ ಎಂದಿದ್ದಾರೆ.
ಮೇಲ್ಕಂಡ ಹಿನ್ನೆಲೆಯಲ್ಲಿ ಕೆಳಕಂಡ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ.
1. ನಿಗಮದ ಬಸ್ಸುಗಳ ಮೇಲೆ ಅಳವಡಿಸುತ್ತಿರುವ ಜಾಹೀರಾತುಗಳಲ್ಲಿ ಹಾಗೂ ನಿಗಮದ ಬಸ್ ನಿಲ್ದಾಣಗಳಲ್ಲಿನ ಜಾಹೀರಾತು ಹೋರ್ಡಿಂಗ್ಸ್ & ಗ್ಲೋಸೈನ್ ಫಲಕಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಪ್ರಚಾರ ಮಾಡದಂತೆ ಕ್ರಮ ವಹಿಸುವುದು. ಇನ್ನು ಮುಂದೆ ಈ ತರಹದ ಜಾಹೀರಾತುಗಳನ್ನು ಅಳವಡಿಸಬಾರದು/ಪ್ರದರ್ಶಿಸಬಾರದು.
2. ಈಗಾಗಲೇ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವಂತಹ ಜಾಹೀರಾತುಗಳನ್ನು ಬಸ್ಸುಗಳಲ್ಲಿ ಆಥವಾ ಬಸ್ ನಿಲ್ದಾಣಗಳಲ್ಲಿ ಅಳವಡಿಸಿದ್ದಲ್ಲಿ, ಅವುಗಳನ್ನು 15 ದಿನಗಳಲ್ಲಿ (ದಿನಾಂಕ 15.02.2026 ರೂಳಗಾಗಿ) ತೆರವುಗೊಳಿಸಲು ಸಂಬಂಧಪಟ್ಟವರಿಗೆ ಸೂಚಿಸುವುದು ಹಾಗೂ ಈ ಬಗ್ಗೆ ಅನುಸರಣಾ ಕ್ರಮ ಕೈಗೊಳ್ಳುವುದು.
3. ವಿಭಾಗಗಳ ವ್ಯಾಪ್ತಿಯಲ್ಲಿನ ಬಸ್ ನಿಲ್ದಾಣಗಳಲ್ಲಿನ ಜಾಹೀರಾತು ಹೋರ್ಡಿಂಗ್ಸ್ & ಗ್ಲೋಸೈನ್ ಫಲಕಗಳನ್ನು ಅಳವಡಿಸಲು ಆಯ್ಕೆಯಾಗಿರುವ ಪರವಾನಗಿದಾರರಿಗೆ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ನೇರವಾದ ಅಥವಾ ಪರೋಕ್ಷವಾದ ಜಾಹೀರಾತುಗಳನ್ನು ಪ್ರಚಾರ ಮಾಡದಂತೆ ನೋಟಿಸ್ ಜಾರಿ ಮಾಡಿ, ಸದರಿ ವಿಷಯದಲ್ಲಿ ಅಗತ್ಯ ಕ್ರಮ ವಹಿಸುವುದು.
ಮೇಲಿನಂತೆ ಕ್ರಮ ತೆಗೆದುಕೊಂಡು ಈ ಕಛೇರಿಗೆ ದಿನಾಂಕ 18.02.2026 ರೊಳಗಾಗಿ ಅನುಸರಣಾ ವರದಿ ಸಲ್ಲಿಸಲು ಕೋರಲಾಗಿದೆ ಅಂತ ಕೆ ಎಸ್ ಆರ್ ಟಿ ಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ(ವಾ) ಎಸ್ ರಾಜೇಶ್ ತಿಳಿಸಿದ್ದಾರೆ.


ತಂದೆ-ತಾಯಿ, ತಂಗಿ ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್: ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಹತ್ಯೆಗೈದ ಪಾಪಿ
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಗಮನಕ್ಕೆ: ಈಗ ಮೆಟ್ರೋ ರೈಲಿನಲ್ಲಿ ಈ ಎಲ್ಲವೂ ನಿಷೇಧ, ತಪ್ಪಿದ್ರೆ ಕೇಸ್, ದಂಡ ಫಿಕ್ಸ್








