ಕೆಎನ್ಎನ್ ಡಿಜಿಟಲ್ ಡೆಸ್ಕ್ : ವರ್ಸೋವಾ ಪೊಲೀಸ್ ಠಾಣೆಯಲ್ಲಿ ದಾಖಲಾದ ಸುಲಿಗೆ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ರಿಯಾಜ್ ಭಾಟಿಯನ್ನು ಮುಂಬೈನ ಅಂಧೇರಿಯಿಂದ ಮುಂಬೈ ಪೊಲೀಸರ ಸುಲಿಗೆ ವಿರೋಧಿ ಸೆಲ್ (ಎಇಸಿ) ಬಂಧಿಸಿದೆ.
ಪಿ.ಎಫ್.ಐ ಕಾರ್ಯಕರ್ತರ ಮೇಲೆ ದಾಳಿ ಪ್ರಕರಣ: ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ – ಸಿಎಂ ಬೊಮ್ಮಾಯಿ
ಭಾಟಿ ಬೆದರಿಕೆ ಹಾಕಿ 30 ಲಕ್ಷ ರೂ. ಮೌಲ್ಯದ ಕಾರು ಮತ್ತು 7.5 ಲಕ್ಷ ನಗದು ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಉದ್ಯಮಿಯೊಬ್ಬರು ಭಾಟಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಎಫ್ಐಆರ್ನಲ್ಲಿ ದಾವೂದ್ ಇಬ್ರಾಹಿಂನ ಆಪ್ತ ಸಹಾಯಕ ಚೋಟಾ ಶಕೀಲ್ ಮತ್ತು ಶಕೀಲ್ನ ಸೋದರಮಾವ ಸಲೀಂ ಖುರೇಷಿ ಹೆಸರು ಕೂಡ ಸೇರಿದೆ. ರಿಯಾಜ್ನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಎಇಸಿ ತಂಡವು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಸಲೀಂನನ್ನು ಕಸ್ಟಡಿಗೆ ಕೋರಲಿದೆ ಎನ್ನಲಾಗುತ್ತಿದೆ.
ದಾವೂದ್ ಇಬ್ರಾಹಿಂ ವಿರುದ್ಧದ ಪ್ರಕರಣದಲ್ಲಿ ಸಲೀಂನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಳೆದ ತಿಂಗಳು ಬಂಧಿಸಿತ್ತು.
ರಾಜ್ಯದಲ್ಲಿ ದಾವೂದ್ ಇಬ್ರಾಹಿಂ ಮತ್ತು ಸಹಚರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
ದೇಶದ ರೈತರಿಗೆ ನವರಾತ್ರಿ ಗಿಫ್ಟ್ ; ಇನ್ನೆರೆಡು ದಿನಗಳಲ್ಲಿ ಖಾತೆ ಸೇರಲಿದೆ 12ನೇ ಕಂತಿನ ₹2,000 ಮೊತ್ತ