ಬೆಂಗಳೂರು: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಅವರ ಪುತ್ರಿ ನಿಶಾ ಸಿಡಿದೆದ್ದಿದ್ದಾರೆ. ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹಾಕಿದ್ದಂತ ಕಾಮೆಂಟ್ ಗೆ ಕಣ್ಣೀರಿಡುತ್ತಲೇ, ತಂದೆಯ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದೇನು ಅಂತ ಮುಂದೆ ಓದಿ.
ಸೋಷಿಯಲ್ ಮೀಡಿಯಾದಲ್ಲಿ ನಿಶಾಗೆ ನೀವು ಯಾಕೆ ನಿಮ್ಮ ತಂದೆಯ ಹೆಸರು ತೆಗೆದು ಕೆಲಸ ಮಾಡಬಾರದು ಅಂತ ಕಾಮೆಂಟ್ ಹಾಕಿದ್ದರು. ಇದಕ್ಕೆ ಲೈವ್ ವೀಡಿಯೋ ಮಾಡಿದಂತ ಅವರು, ನಾನು 10 ವರ್ಷ ಇದ್ದಾಗಲೇ ನನ್ನ ತಂದೆ ನನ್ನಿಂದ ದೂರು ಹೋಗಿದ್ರು, ಚುನಾವಣೆ ವೇಳೆಯಲ್ಲಿ ನನ್ನನ್ನು ಕರೆಯುತ್ತಾ ಇದ್ರು. ಆಗ ನಮ್ಮ ತಂದೆ ಪರ ಪ್ರಚಾರಕ್ಕೆ ಹೋಗ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.
ನಾನು ನನ್ನ ತಂದೆ ದೂರವಾದ 24 ವರ್ಷಗಳ ಬಳಿಕ ಅವರನ್ನ ನೋಡುತ್ತಿದ್ದೇನೆ. ಚುನಾವಣೆ ಟೈಮ್ ನಲ್ಲಿ ಮನೆ ಮನೆಗೆ ತೆರಳಿ ತಂದೆ ಗೆಲುವಿಗೆ ಮತಯಾಚನೆ ಮಾಡಿದ್ದೆ. ಆಗ ನಾನು ಸಿಪಿ ಯೋಗೇಶ್ವರ್ ಅವರಿಗೆ ಆದರ್ಶ ಮಗಳಾಗಿದ್ದೆ ಅಂತ ಹೇಳಿದ್ದಾರೆ.
ನನ್ನ ಹೆಸರಿನ ಜೊತೆಗೆ ತಂದೆ ಹೆಸರು ತೆಗೆದು ಬಿಡಿ ಅಂತ ಕಾಮೆಂಟ್ ಹಾಕಿರೋದು ಯಾರು ಅಂತ ನನಗೆ ಗೊತ್ತು. ನಾನು ಹೇಗೆ ತೆಗೆಯಲಿ ಹೇಳಿ. ಆಧಾರ್ ಕಾರ್ಡ್, ಪಾಸ್ ಪೋರ್ಟ್ ನಲ್ಲಿ ತಂದೆಯ ಹೆಸರು ತೆಗೆದು ಬದಲಾವಣೆ ಮಾಡಬೇಕ ಅಂತ ಪ್ರಶ್ನಿಸಿದ್ದಾರೆ.
ಹೆಸರು ತೆಗೆದ ಮಾತ್ರಕ್ಕೆ ಸಿಪಿ ಯೋಗೇಶ್ವರ್ ನನ್ನ ತಂದೆ ಅಲ್ಲ ಅನ್ನೋಕೆ ಆಗುತ್ತಾ ಎಂದು ಪ್ರಶ್ನಿಸಿದಂತ ಅವರು, ಭಗವಂತನ ಇಚ್ಛೆಯಿಂದ ನಾನು ಅವರ ಮಗಳಾಗಿ ಹುಟ್ಟಿದ್ದೇನೆ. ಕೆಲವರಿಗೆ ನನ್ನ ಹೆಸರಿನೊಂದಿಗೆ ಅವರ ಹೆಸರಿರೋದು ಸಹಿಸೋದಕ್ಕೆ ಆಗ್ತಿಲ್ಲ. ನಿಮ್ಮ ತಂದೆ ತಾಯಿ ಅವ್ರನ್ನ ಅರ್ಥ ಮಾಡ್ಕೊಳ್ಳೋಕೆ ಆಗುತ್ತಿಲ್ಲ ಅಂತೀರಾ? ಎಂದು ಕೆಂಡ ಮಂಡಲರಾಗುತ್ತಲೇ ಕಣ್ಣೀರಿಟ್ಟಿದ್ದಾರೆ.
‘ಬೆಂಗಳೂರಿನ ಸೌಂದರ್ಯ’ಕ್ಕೆ ಹೆಚ್ಚು ಆದ್ಯತೆ ನೀಡಿ: ಸಿಟಿ ರೌಂಡ್ಸ್ ವೇಳೆ ‘ಸಿಎಂ ಸಿದ್ಧರಾಮಯ್ಯ’ ಸೂಚನೆ
BIG NEWS: ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಎಂದ ‘ರಾಹುಲ್ ಗಾಂಧಿ’ ವಿರುದ್ಧ ‘JDS’ ದೂರು