ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ( School ) ಗಣಪತಿ ಹಬ್ಬ ಆಚರಣೆಗೆ ( Ganesha Festival ) ಅವಕಾಶ ನೀಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿವಾದ ರಾಜ್ಯದಲ್ಲಿ ಶುರುವಾಗಿದೆ. ಹಿಜಾಬ್ ( Hijab Row ) ವರ್ಸಸ್ ಕೇಸರಿ ಶಾಲು ಬಳಿಕ, ಈಗ ಶಾಲೆಗಳಲ್ಲಿ ಹಬ್ಬಗಳ ಆಚರಣೆ ವಿವಾದ ಶುರುವಾಗಿದೆ. ಗಣೇಶ ಹಬ್ಬ ಆಚರಣೆಯಂತೆ, ಶಾಲೆಗಳಲ್ಲಿಯೂ ಮುಸ್ಲೀಂ ಸಮುದಾಯದ ಹಬ್ಬಗಳ ಆಚರಣೆಗೆ ಅವಕಾಶ ನೀಡಬೇಕು ಎಂಬುದಾಗಿ ಒತ್ತಾಯಿಸಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿ ಸಾಆದಿ ( Moulana Shafi Sa-adi ) ಅವರು, ರಾಜ್ಯ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆ ಕಾಪಾಡಬೇಕು. ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂದಿದ್ದಾರೆ.
ಹಾಸ್ಟೆಲ್ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್: ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ
ಶಾಲೆಗಳಲ್ಲಿ ಗಣೇಶ ಹಬ್ಬ ಆಚರಣೆಗೆ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಅದೇ ರೀತಿ ಈದ್ ಮಿಲಾದ್ ಆಚರಣೆಗೂ ಅವಕಾಶ ನೀಡಬೇಕು. ಮುಸ್ಲೀಂ ಸಮುದಾಯದ ಹಬ್ಬಗಳ ಆಚರಣೆಗೂ ಅವಕಾಶ ನೀಡಲಿ ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ʻಸ್ಮೃತಿ ಇರಾನಿʼಯನ್ನು ಕೂಡಲೇ ವಜಾಗೊಳಿಸುವಂತೆ ಆಗ್ರಹಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಗೋವಾ ಶಾಸಕ…?
ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಮುಸ್ಲೀಂ ವಿದ್ಯಾರ್ಥಿಗಳು ನಮಾಜ್ ಮಾಡೋದಕ್ಕೆ ಪ್ರತ್ಯೇಕವಾದ ಕೊಠಡಿ ನಿಗದಿ ಪಡಿಸಬೇಕು. ಪ್ರತಿ ಮಕ್ಕಳಿಗೂ ಧರ್ಮದ ಆಚರಣೆ, ಧಾರ್ಮಿಕ ಪಾಠದ ಅವಶ್ಯಕತೆ ಇದೆ. ಶಾಲೆಗಳಲ್ಲಿ ಇಸ್ಲಾಂ ಧರ್ಮದ ಆಚರಣೆಗೂ ಅವಕಾಶ ನೀಡಿ. ಗಣೇಶೋತ್ಸವದ ರೀತಿಯಲ್ಲೇ ಈದ್ ಮಿಲಾದ್ ಆಚರಣೆಗೂ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
15,000 ಶಾಲಾ ಶಿಕ್ಷಕರ ನೇಮಕ ಪರೀಕ್ಷೆಯ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ | Teacher Recruitment Result