ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್ ಸ್ವಚ್ಛ ಮಾಡಿದ್ದ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸಿ ಗೀತಾ ಹುಡೇದ, ಚಾಮರಾಜನಗರ ತಹಶೀಲ್ದಾರ್ ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಸಭೆ ನಡೆಸಿದರು.
ತೊಂಬೆ ನೀರು ಹರಿಯಬಿಟ್ಟ ವಿಡಿಯೊ ಜೊತೆ ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ತೊಂಬೆ ನೀರು ಖಾಲಿ ಮಾಡಿ ಗಂಜಳದಿಂದ ಸ್ವಚ್ಛ ಮಾಡಿಸಿದ್ದರು ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸುದ್ದಿಯಾಯಿತು. ಕೂಡಲೆ ತಹಶೀಲ್ದಾರ್ ಕ್ರಮವಹಿಸಿ ವಿಚಾರಣೆ ವೇಳೆ ಸರಗೂರು ಗ್ರಾಮದವರು ಈ ಅಮಾನವೀಯ ಘಟನೆ ಬಗ್ಗೆ ತಹಶೀಲ್ದಾರ್ ಮುಂದೆ ತಿಳಿಸಿದ್ದಾರೆ.
HEALTH TIPS: ‘ಟೊಮೆಟೊ’ ಆರೋಗ್ಯಕರ, ಆದರೆ ಈ ಸಮಸ್ಯೆಯಿರುವ ಜನರಿಗೆ ಅಪಾಯಕಾರಿ | Tomato
ತೊಂಬೆಗಳಲ್ಲಿ ನೀರು ಕುಡಿದ ದಲಿತ ಯುವಕರು
ಈ ಸಭೆ ಬಳಿಕ ತಹಶೀಲ್ದಾರ್ ಬಸವರಾಜು ಅವರು ಗ್ರಾಮದ ಎಲ್ಲಾ ತೊಂಬೆ ನಲ್ಲಿಗಳಿಗೆ ತೆರಳಿ ದಲಿತ ಯುವಕರಿಂದ ನೀರು ಕುಡಿಸಿದ್ದಾರೆ. ಜೊತೆಗೆ, ತೊಂಬೆಗಳ ಮೇಲೆ’ ಇದು ಸಾರ್ವಜನಿಕ ಆಸ್ತಿಯಾಗಿದ್ದು, ಎಲ್ಲಾ ಸಮುದಾಯದವರು ಇದನ್ನು ಬಳಸಬಹುದು’ ಎಂದು ಬರೆಸಿದ್ದಾರೆ.
ಗ್ರಾಮದ ಯುವಕನಿಂದ ದೂರೊಂದನ್ನು ಪಡೆದಿದ್ದು, ನೊಂದ ಮಹಿಳೆಯನ್ನು ಪತ್ತೆಹಚ್ಚಲು ತಾಲೂಕು ಆಡಳಿತ ಮುಂದಾಗಿದೆ. ಬಳಿಕ, ಆ ಮಹಿಳೆಯಿಂದಲೂ ದೂರನ್ನು ಪಡೆದು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
BREAKING NEWS: ಹೃದಯಾಘಾತದಿಂದ ಟಾಲಿವುಟ್ ನಟಿ ಐಂದ್ರಿಲಾ ಶರ್ಮಾ ನಿಧನ | Actor Aindrila Sharma No More
ಏನಿದು ಪ್ರಕರಣ
ಕಳೆದ ಶುಕ್ರವಾರ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮಕ್ಕೆ ಹೆಚ್. ಡಿ ಕೋಟೆ ತಾಲೂಕಿನ ಸರಗೂರು ಗ್ರಾಮಸ್ಥರು ಬಂದಿದ್ದರು.ಮಧ್ಯಾಹ್ನದ ಊಟ ಮುಗಿಸಿ ಬಸ್ಗೆ ಹೋಗುವ ಸಂದರ್ಭದಲ್ಲಿ ಮಹಿಳೆಯೊಬ್ಬರು ಗ್ರಾಮದ ಹಳೆ ಮಾರಿಗುಡಿ ಬಳಿ ಸವರ್ಣೀಯರ ಬೀದಿಯಲ್ಲಿನ ತೊಂಬೆಯ ನಲ್ಲಿಯಲ್ಲಿ ನೀರು ಕುಡಿದಿದ್ದಾರೆ. ಅದೇ ಬೀದಿಯವರು ಯಾರೋ ಇದನ್ನು ನೋಡಿ ಮಹಿಳೆ ದಲಿತ ಸಮುದಾಯದವಳು ಎಂದು ಗೊತ್ತಾಗುತ್ತಿದ್ದಂತೆ ನೀರನ್ನು ಖಾಲಿ ಮಾಡಿಸಿ ಗಂಜಲ ಹಾಕಿ ತೊಳೆದಿದ್ದಾರೆ ಎನ್ನಲಾಗಿ ವ್ಯಾಪಕ ಚರ್ಚೆ ನಡೆದು ಸುದ್ದಿಯಾಗಿತ್ತು.
ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ, ಚಾಮರಾಜನಗರ