ಕಲಬುರ್ಗಿ : ಕಲಬುರ್ಗಿಯಲ್ಲಿ ಅಮಾಯಕ ಯುವತಿ ನೀರನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷರು ಆಗಿರುವಂತಹ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿ ದಲಿತ ಸೇನೆ ಕ್ರೂರ ಸಂಘಟನೆ, ಎಲ್ಇಟಿ ಸಂಘಟನೆ ಮೀರಿಸುವಂತಿದೆ ಎಂದು ಕಿಡಿ ಕಾರಿದರು.
ಕಲ್ಬುರ್ಗಿಯಲ್ಲಿ ಯುವತಿಯರನ್ನು ಬಳಸಿಕೊಂಡು ಹನಿ ಟ್ರಾಪ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಸಿದ್ದಲಿಂಗ ಸ್ವಾಮಿಜಿ ಮಾತನಾಡಿ, ಇತ್ತೀಚಿಗೆ ಕಲಬುರ್ಗಿ ಜಿಲ್ಲೆ ಕುಖ್ಯಾತಿಗೆ ಒಳಗಾಗುತ್ತಿದೆ. ಸಮಾಜ ಸೇವೆ ಮುಖವಾಡ ಧರಿಸಿ ಹೆಣ್ಣು ಮಕ್ಕಳನ್ನು ದಂಧೆ ಮೈಗೆ ಬಳಸುತ್ತಿದ್ದಾರೆ. ದಲಿತ ಸೇನೆ ಕ್ರೂರ ಸಂಘಟನೆ, ಎಲ್ಇಟಿ ಸಂಘಟನೆ ಮೀರಿಸುವಂತಿದೆ ಎಂದು ವಾಗ್ದಾಳಿ ನಡೆಸಿದರು.
ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರವಾಗಿದೆ. ಭ್ರೂಣ ಹತ್ಯೆ ಮಹಾ ಪಾಪ. ದಲಿತ ಸಂಘಟನೆಯವರು ಭ್ರೂಣ ಹತ್ಯೆ ಮಾಡಿಸಿದ್ದಾರೆ. ನ್ಯಾಯಕ್ಕಾಗಿ ಬಂದ ಮಹಿಳೆಯನ್ನು ಹನಿ ಟ್ರ್ಯಾಪ್‍ಗೆ ಬಳಸಿಕೊಂಡಿದ್ದಾರೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಆಗಿದೆ. ಪೊಲೀಸರು ತನಿಖೆಗೆ ಮುಂದಾಗುತ್ತಿಲ್ಲ. ಸ್ಟ್ರಾಂಗ್ ಮಿನಿಸ್ಟರ್ ಪವರ್ಫುಲ್ ಕಮಿಷನರ್ ಇದ್ದರು ತನಿಖೆ ಆಗಿಲ್ಲ ಎಂದು ಆರೋಪಿಸಿದರು.
ಹನಿ ಟ್ರಾಪ್ ಅತ್ಯಾಚಾರ ಕೇಸು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ದಲಿತ ಸೇನೆ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಮಾಧ್ಯಮಗಳ ಮುಂದೆ ಆರೋಪಿ ಮಾತನಾಡಿದರೂ ಕೂಡ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನು ಇನ್ನು ಏಕೆ ಅರೆಸ್ಟ್ ಮಾಡುತ್ತಿಲ್ಲ. ಇಷ್ಟೆಲ್ಲಾ ಆದರೂ ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಈ ಬಗ್ಗೆ ಒಂದು ಹೇಳಿಕೆ ಕೊಟ್ಟಿಲ್ಲ ನಿಮ್ಮವರೆಂದು ಸುಮ್ಮನಿದ್ದೀರ? ಎಂದು ಪ್ರಶ್ನಿಸಿದರು.
ಇವರು ಕೇವಲ ಹನಿ ಟ್ರ್ಯಾಪ್ ಮಾಡಿಲ್ಲ ಭೂಕಬಳಿಕೆ ಸಹ ಮಾಡಿದ್ದಾರೆ. ಕಲಬುರ್ಗಿಯಲ್ಲಿ ಲೂಟಿ ದರೋಡೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಇಲ್ಲದಿದ್ದರೆ ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.