ನವದೆಹಲಿ : ಯಂಗ್ ಇಂಡಿಯಾ ಅಕ್ರಮ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದು ಇಡಿ ವಿಚಾರಣೆಗೆ ಹಾಜರಾದರು.
ದೆಹಲಿಯಲ್ಲಿ ಇಡಿ ಎದುರು ವಿಚಾರಣೆ ಎದುರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ‘ನಾನು ಮೂರು ವಾರ ಸಮಯ ಕೇಳಿದ್ದೆ, ಆದರೆ ಅವರು ನೀಡಿಲ್ಲ, ಇಂದೇ ಬರಬೇಕು ಎಂದು ಹೇಳಿದ್ದರು. ಉಜ್ಜಯಿನಿ ಮಹಾಕಾಲೇಶ್ವರ ದೇವಾಲಯದಿಂದ ನೇರವಾಗಿ ನಾನು ಇಲ್ಲಿಗೆ ಬಂದಿದ್ದೇನೆ, ನಾವು ಸಂಸ್ಥೆ ಹಾಗೂ ಸಮನ್ಸ್ ನ್ನು ಗೌರವಿಸುತ್ತೇವೆ , ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ’ ಎಂದರು.
ಇಂದು ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇನೆ. ನಾವು ಸಾರ್ವಜನಿಕ ಜೀವನದಲ್ಲಿದ್ದೇನೆ, ಮರೆ ಮಾಚಲು ಏನೂ ಇಲ್ಲ, ನಾನಷ್ಟೇ ಅಲ್ಲ ಯಂಗ್ ಇಂಡಿಯಾದ ಹಲವರು ದೇಣಿಗೆ ನೀಡಿದ್ದಾರೆ ಎಂದರು.
ಮಕ್ಕಳಿಗೆ ಕೇಸರಿ ಬಣ್ಣದ್ದಾದರೂ ಸೈಕಲ್ ಕೊಡಿ : ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ