ಬೆಂಗಳೂರು : ರಾಜ್ಯದಲ್ಲಿ ಹಲವು ಕಡೆ ಮಹಾಮಳೆ ಜನರಲ್ಲಿ ತಲ್ಲಣ ಸೃಷ್ಟಿ ಮಾಡಿದ್ದು, ಕೆಲವು ಕಡೆ ಸುರಿದ ಮಳೆ ಭಾರೀ ಅನಾಹುತ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಂತೂ ಮಳೆರಾಯ ಬಿಟ್ಟು ಬಿಡದೇ ಕಾಡುತ್ತಿದ್ದಾನೆ.
ಬಂಗಾಳಕೊಲ್ಲಿಯ ಅಂಡಮಾನ್ ಪ್ರದೇಶದ ಸಮುದ್ರದಲ್ಲಿ ಕಳೆದ ಐದಾರು ದಿನದ ಹಿಂದೆ ಸೃಷ್ಟಿಯಾಗಿದ್ದ ಮೇಲ್ಮೈ ಸುಳಿಗಾಳಿ ಭಾನುವಾರ ರಾತ್ರಿ ವೇಳೆಗೆ ವಾಯುಭಾರ ಕುಸಿತವಾಗಿ ಬದಲಾಗಿ ಸೋಮವಾರ ಚಂಡಮಾರುತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮೇಲ್ಮೈ ಸುಳಿಗಾಳಿ ಭಾನುವಾರ ರಾತ್ರಿ ವೇಳೆಗೆ ವಾಯುಭಾರ ಕುಸಿತವಾಗಿ ಬದಲಾಗಿ ಸೋಮವಾರ ಚಂಡಮಾರುತವಾಗಲಿದೆ. ಇದಕ್ಕೆ ‘ಸಿತ್ರಾಂಗ್ ಚಂಡಮಾರುತ’ ಎಂದು ಹೆಸರಿಡಲಾಗಿದೆ ಎಂದು ಕರ್ನಾಟಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ.ಪ್ರಸಾದ್ ಹೇಳಿದರು.
ಮಂಗಳವಾರದ ವೇಳೆಗೆ ‘ಸಿತ್ರಾಂಗ್’ ಚಂಡಮಾರುತವು ಬಾಂಗ್ಲಾದೇಶ ಕಾರಾವಳಿಯ ಎರಡು ದ್ವೀಪಗಳ ಮಧ್ಯೆ ಹಾದು ಹೋಗಲಿದ್ದು, ಕರ್ನಾಟಕದ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಕರ್ನಾಟಕ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬುಧವಾರದವರೆಗೆ ಮೂರು ದಿನ ಹಗುರ ಮಳೆ ಸಾಧ್ಯತೆ ಇದೆ. ಅದೇ ರೀತಿ ಉತ್ತರ ಒಳನಾಡಿನಲ್ಲಿ ಮಂಗಳವಾರದವರೆಗೆ ಉತ್ತರ ಒಳನಾಡಿನಲ್ಲಿ ಸಾಮಾನ್ಯ ಮಳೆ ನಿರೀಕ್ಷೆ ಇದ್ದು, ನಂತರದ ದಿನಗಳಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಲಿದೆ.
VIRAL VIDEO: ದೀಪಾವಳಿಯ ಮುನ್ನಾದಿನ ಸರಯೂ ನದಿಯಲ್ಲಿ ಮ್ಯೂಸಿಕಲ್ ಲೇಸರ್ ಶೋ : ವೀಡಿಯೊ ನೋಡಿ