ಕಲಬುರ್ಗಿ : ಇರಾನ್ ಇಸ್ರೇಲ್ ಯುದ್ಧದ ಪರಿಣಾಮದಿಂದ ರಾಜ್ಯಾದ್ಯಂತ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದಾಗಿ ಹಲವು ಕಡೆಗಳಲ್ಲಿ ಹಲವು ರೀತಿಯಲ್ಲಿ ಜನ ನಿಜಕ್ಕೂ ಬಾಧನೆಗೆ ಒಳಗಾಗಿದ್ದಾರೆ ಹೌದು, ಇದೀಗ ಈ ಒಂದು ಪರಿಣಾಮ ಇಂದಿರಾ ಕ್ಯಾಂಟೀನ್ ಮೇಲೂ ಬೀರಿದೆ. ಕಲಬುರ್ಗಿಯಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಇದೀಗ ಕೆಲಸ ಕಳೆದುಕೊಂಡಿದ್ದಾರೆ.
ರಾಜ್ಯಾದ್ಯಂತ ಸಿಲಿಂಡರ್ ಅಭಾವದಿಂದ ಈ ಒಂದು ಸಮಸ್ಯೆ ಆಗಿದ್ದು ಇಂದಿರಾ ಕ್ಯಾಂಟೀನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ ಗುತ್ತಿಗೆದಾರರು ಇಂದಿನಿಂದ ಕೆಲಸಕ್ಕೆ ಬರಬೇಡಿ ಅಂತ ಮಹಿಳೆಯರಿಗೆ ಹೇಳಿರುವ ಹಿನ್ನೆಲೆಯಲ್ಲಿ ಮಹಿಳೆಯರು ಕೆಲಸ ಕಳೆದುಕೊಂಡು ಕಂಗಾಲಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ 10 ಮಹಿಳೆಯರನ್ನು ಗುತ್ತಿಗೆದಾರರು ಕೈಬಿಟ್ಟಿದ್ದಾರೆ. ಇದೀಗ ಕೆಲಸ ಕಳೆದುಕೊಂಡು ಮಹಿಳೆಯರ ಜೀವನ ದುಸ್ತರವಾಗಿದೆ.








