ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮನೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಗ ಮೃತಪಟ್ಟಿದ್ದು, ತಾಯಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
BIGG NEWS: ರಾಜ್ಯ ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ; ಬಸನಗೌಡ ಯತ್ನಾಳ್
ಶುಭಾಶ್ ಪೂಜಾರ್ ಎಂಬಾತ ಸಾವನ್ನಪ್ಪಿದ್ದು, ತಾಯಿ ಗುತ್ತ್ಯಮ್ಮಗೆ ತೀವ್ರ ಗಾಯಗಳಾಗಿದೆ. ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗಲೇ ಘಟನೆ ನಡೆದಿದ್ದು, ಬಹುದೊಡ್ಡ ಅನಾಹುತ ತಪ್ಪಿದೆ. ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮಹಿಳೆಗೆ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
BIGG NEWS: ರಾಜ್ಯ ಸಚಿವ ಸಂಪುಟ ವಿಸ್ತರಣೆ ಈಗ ಯಾರಿಗೂ ಬೇಕಾಗಿಲ್ಲ; ಬಸನಗೌಡ ಯತ್ನಾಳ್
ಸಿಲಿಂಡರ್ ತಂದು ಫಿಕ್ಸ್ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕ್ ಆಗಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ. ಮಹಿಳೆಯು ಕಟ್ಟಿಗೆ ಒಲೆಯಲ್ಲಿ ರೊಟ್ಟಿ ಸುಡುತ್ತಿದ್ದರು. ಪಕ್ಕದಲ್ಲಿ ಮಗ ಸುಭಾಶ್ ಸಿಲಿಂಡರ್ ಫಿಕ್ಸ್ ಮಾಡುವಾಗ ಎರಡು ಬಾರಿ ಗ್ಯಾಸ್ ಲೀಕ್ ಆಗಿದೆ. ಅದನ್ನು ಸುಭಾಶ್ ಗಮನಿಸಿರಲಿಲ್ಲ ಎನ್ನಲಾಗುತ್ತಿದೆ.