ಕೆಎನ್ ಎನ್ ನ್ಯೂಸ್ ಡೆಸ್ಕ್ : ಎಲ್ಲರು ಅಡುಗೆ ಮನೆಯಲ್ಲಿ ಸಿಗುವ ಜೀರಿಗೆ ಕಾಳುನಿಂದ ಆರೋಗ್ಯಕ್ಕೆ ಹಲವು ಪ್ರಯೋಜನೆಯಾಗಲಿದೆ. ಹೆಚ್ಚಾಗಿ ಹೊಟ್ಟೆ ನೋವು ಬಂದು ತಕ್ಷಣ ನೆನಪಿಗೆ ಬರೋದೆ ಜೀರಿಗೆ ನೀರು. ಇದನ್ನು ಒಂದು ಲೋಟ ಕುಡಿದ್ರೆ ಸಾಕು ಜೀರ್ಣಕ್ರಿಯೆ ಉತ್ತಮ ಆಗಿರುತ್ತದೆ.
BIGG BREAKING NEWS: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್ ಪಾಸಿಟಿವ್| Covid
ನಿತ್ಯ ಆಹಾರದಲ್ಲಿ ಬಳಕೆ ಮಾಡುವ ಜೀರಿಗೆ ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಉಪಯುಕ್ತವಾದ ಪದಾರ್ಥ. ರೋಗ ನಿರೋಧಕ ಶಕ್ತಿಯಷ್ಟೇ ಅಲ್ಲ, ಹೊಟ್ಟೆ ಸಮಸ್ಯೆ, ಕೂದಲು ಉದುರುವಿಕೆ, ಮುಖದ ಮೊಡವೆಗಳಿಗೆ ಅನುಕೂಲವಾಗುತ್ತದೆ. ಇಲ್ಲಿದೆ ಪ್ರಯೋಜನೆ ಆಗೋದು
* ಜೀರಿಗೆಯಲ್ಲಿ ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶ ಹೇರಳವಾಗಿರುತ್ತದೆ. ರಾತ್ರಿ ವೇಳೆ ಜೀರಿಗೆ ನೆನೆಹಾಕಿ, ಬೆಳಗ್ಗೆ ಅದೇ ನೀರಿನಲ್ಲಿ ಮತ್ತಷ್ಟು ನೀರು ಸೇರಿಸಿ ಕುದಿಸಿ ಟೀ ರೀತಿಯಲ್ಲಿ ಕುಡಿದರೆ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
*ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.
*ಜೀರಿಗೆಯಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಸೇರಿ ವಿವಿಧ ಖನಿಜಗಳಿಂದ ಕೂಡಿದೆ. ವಿಟಮಿನ್ ಎ, ಬಿ, ಸಿ ಹೇರಳವಾಗಿರುವುದರಿಂದ ಸೋಂಕು ನಿವಾರಕವಾಗಿಯೂ ಇದು ಕೆಲಸ ಮಾಡುತ್ತದೆ.
*ಯಕೃತ್ತಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ
BIGG BREAKING NEWS: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮತ್ತೆ ಕೋವಿಡ್ ಪಾಸಿಟಿವ್| Covid
*ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಹೊಟ್ಟೆ ಮುರಿತ ಈ ಎಲ್ಲ ಸಮಸ್ಯೆಗಳಿಗೂ ರಾಮಬಾಣವಾಗಿರಲಿದೆ.
*ಜೀರಿಗೆ ನೀರು ನಿಮ್ಮ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜೀರ್ಣಕ್ರಿಯೆಯನ್ನು ಸುಧಾರಿಸಲೂ ಜೀರಿಗೆ ನೀರು ಸಹಾಯ ಮಾಡುತ್ತದೆ. ಚಯಾಪಚಯವನ್ನು ಸುಧಾರಿಸುವುದರ ಜತೆಗೆ ಕಾರ್ಬೋಹೈಡ್ರೇಟ್ಗಳು, ಗ್ಲೂಕೋಸ್ ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡಲಿದೆ.