ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಮನಬಂದಂತೆ ಹೊಡೆದು ಮೃತಪಟ್ಟಿರುವ ಘಟನೆ ನಡೆದಿದೆ. ಇದೀಗ ಪ್ರಕರಣದ ಆರೋಪಿ ರಕ್ಕಸ ಶಿಕ್ಷಕ ಪೊಲೀಸರ ಅತಿಥಿಯಾಗಿದ್ದಾನೆ.
9 ವರ್ಷದ ಭರತ್ ಬಾರಕೇರಿ ಎಂಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿ ಕೊಂದ ಕ್ರೂರಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹದಗಿ ಶಾಲೆಯ ಅತಿಥಿ ಶಿಕ್ಷಕನಾಗಿರುವ ಮುತ್ತಪ್ಪ ಹಡಗಲಿ ಎಂಬಾತ ವಿದ್ಯಾರ್ಥಿಯ ಹಲ್ಲೆ ಮಾಡಿದ್ದು, ಗಂಭೀರ ಗಾಯವಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮೃತಪಟ್ಟಿದ್ದಾನೆ. ಸಲಾಕೆಯಿಂದ ಹೊಡೆದು ಶಾಲಾ ಕಟ್ಟದಿಂದ ತಳ್ಳಿ ನೀಚ ಈ ಕೃತ್ಯ ಎಸಗಿದ್ದನು.
ಭರತ್ ತಾಯಿ ಗೀತಾ ಕೂಡ ಅದೇ ಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದರು. ಆಕೆಯ ಮೇಲೂ ಈತ ಹಲ್ಲೆ ಮಾಡಿದ್ದಾನೆ. ಈ ಪರಿಣಾಮವಾಗಿ ಆಕೆಗೂ ಗಂಭೀರ ಗಾಯವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ಆದೇಶ ಹಿಂಪಡೆಯದಿದ್ದರೆ ಡಿ.26ರಿಂದ ಧರಣಿ : ಬಸವಪ್ರಭು ಶ್ರೀ
Watch Video | ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಸಂಸದರ ಜೊತೆ ರಾಗಿ ಭೋಜನ ಸವಿದ ಪ್ರಧಾನಿ ಮೋದಿ