ಹಾಸನ: ಅಪ್ರಾಪ್ತ ಬಾಲಕಿಗೆ ಮದುವೆಯಾಗಿದ್ದ ಅಪ್ರಾಪ್ತ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೂಡು, ಕೂಡ್ಲೂರುದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯನ್ನು ಎರಡು ತಿಂಗಳ ಹಿಂದೆ ಬಾಲಕಿಯ ಎಂಗೇಜ್ಮೆಂಟ್ ಆಗಿದೆ ಎನ್ನಲಾಗಿದೆ. ಈ ನಡುವೆ ನಡುವೆ ಹೆತ್ತವರು ಮದುವೆಯನ್ನು ದಿನೇಶ್ ಎನ್ನುವರ ಜೊತೆಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಈ ನಡುವೆ ದಿನೇಶ್ ಮದುವೆ ಫಿಕ್ಸ್ ಆದ ಮೇಲೆ ಆಗಾಗ್ಗೆ ಹೊರಗೆ ಕರೆದುಕೊಂಡು ಹೋಗುತ್ತಿದ್ದನಂತೆ. ಅದೇ ರೀತಿ ಕಳೆದ ಎರಡು ದಿನಗಳ ಹಿಂದೆ ದಿನೇಶ್ ರಾಮನಾಥಪುರದಲ್ಲಿ ನಡೆಯುವ ಜಾತ್ರೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ನಡುವೆ ದಿನೇಶ್ ಕರೆ ಮಾಡಿ ನಿಮ್ಮ ಮಗಳು ವಿಶ ಸೇವನೆ ಮಾಡಿದ್ದಾಳೆ ಅಂತ ತಿಳಿಸಿದ್ದಾರೆ. ಇದೇ ವೇಳೆ ದಿನೇಶ್ ಕೂಡ ವಿಶ ಸೇವಿಸಿದ್ದಾನೆ ಎನ್ನಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆಯಲ್ಲಿ ಬಾಲಕಿ ಚಿಕಿತ್ಸೆ ಫಲಕಾರಿಯಗದೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಮೃತ ಬಾಲಕಿಯ ಮೈ ಮೇಲೆ ಗಾಯಗೊಳು ಕಾಣಿಸಿಕೊಂಡಿದ್ದಾವೆ ಎನ್ನಲಾಗಿದೆ. ಈ ನಡುವೆ ಘಟನೆ ಸಂಬಂಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯನ್ನು ಮುಚ್ಚಿ ಹಾಕಲು ಹುಡುಗಿ ಕಡೆಯವರಿಗೆ ಹುಡುಗನ ಕಡೆಯವರು ಹಣದ ಆಮಿಶವನ್ನು ನೀಡಿದ್ದರು ಎನ್ನಲಾಗಿದೆ.