ದಾವಣಗೆರೆ : ಜಿಲ್ಲೆಯಲ್ಲಿ ಗಣೇಶ ವಿಸರ್ಜನೆಯ ಮುಂಜಾಗ್ರತಾ ಕ್ರಮವಾಗಿ ನಾಳೆ, ನಾಡಿದ್ದು ಕೆಲ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಸೆಪ್ಟೆಂಬರ್ 21 ರಂದು ಮತ್ತು ಸೆಪ್ಟೆಂಬರ್ 22 ರಂದು ಚನ್ನಗಿರಿ ಹಾಗೂ ಹೊನ್ನಾಳಿ ಪಟ್ಟಣದಲ್ಲಿ ಗಣೇಶಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.
ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡಲು ಸೆ.21 ರಂದು ಮಲೇಬೆನ್ನೂರು ವ್ಯಾಪ್ತಿ ಮತ್ತು ಸೆ.22 ರಂದು ಚನ್ನಗಿರಿ ತಾಲ್ಲೂಕಿನಾದ್ಯಂತ ಹಾಗೂ ಹೊನ್ನಾಳಿ ಪಟ್ಟಣ ವ್ಯಾಪ್ತಿಯಲ್ಲಿ ಅಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ, ಮದ್ಯದಂಗಡಿ ಗಳನ್ನು ಮುಚ್ಚಲು ಜಿಲ್ಲಾ ದಂಡಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
BREAKING: ಚಿಕ್ಕೋಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಹಾರಾಡಿದ ಪ್ಯಾಲೆಸ್ತೀನ್ ಧ್ವಜ: ನಾಲ್ವರು ಪೊಲೀಸ್ ವಶಕ್ಕೆ
BREAKING: ರಾಜ್ಯ ಸರ್ಕಾರದಿಂದ ‘ಮುಜರಾಯಿ ಇಲಾಖೆ ದೇವಾಲಯ’ಗಳಲ್ಲಿ ಪ್ರಸಾದ ತಯಾರಿಕೆಗೆ ‘ನಂದಿನಿ ತುಪ್ಪ’ ಬಳಸಲು ಆದೇಶ