ಬೆಂಗಳೂರು : ರಾಜ್ಯದಲ್ಲಿ ದೀಪಾವಳಿ ಹಬ್ಬ ಆಚರಿಸುವ ಭರದಲ್ಲಿ ಒಂದೆಡೆ ಪಟಾಕಿ ಸಿಡಿಸುವುದು ಹೆಚ್ಚಾಗಿದ್ರೆ ಇನ್ನೊಂದೆಡೆ ಪಟಾಕಿಯಿಂದ ಅವಘಡಗಳೂ ಹೆಚ್ಚಾಗುತ್ತಿದೆ.
ಇದೀಗ ಪಟಾಕಿ ಸಿಡಿಸಿಲು ಹೋಗಿ ಮತ್ತೋರ್ವ ಯುವಕ ಕಣ್ಣಿಗೆ ಪೆಟ್ಟು ಮಾಡಿಕೊಂಡ ಘಟನೆ ಶ್ರೀನಗರದಲ್ಲಿ ನಡೆದಿದೆ. ಗಾಯಾಳುಗೆ ಸದ್ಯ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು,ಇದುವರೆಗೆ ಐವರು ಪಟಾಕಿಯಿಂದ ಗಾಯಗೊಂಡ ಐವರು ಗಾಯಾಳುಗಳು ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ಹೆಚ್ಚಾಗುತ್ತಿದ್ದು, ಪಟಾಕಿ ಬಗ್ಗೆ ಎಷ್ಟೇ ಜಾಗೃತಿ ವಹಿಸಲು ಹೇಳಿದರೂ ಸಹ ಯುವಕರು ಕ್ಯಾರೇ ಎನ್ನುತ್ತಿಲ್ಲ. ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಪೆಟ್ಟುಮಾಡಿಕೊಳ್ಳುತ್ತಿದ್ದಾರೆ.
ನಾಳೆ ಸೂರ್ಯಗ್ರಹಣ : ಗ್ರಹಣ ಆರಂಭ, ಸೂತಕ ಕಾಲದಲ್ಲಿ ಏನೆಲ್ಲ ನಿಯಮ ಪಾಲಿಸಬೇಕು ಗೊತ್ತಾ? ಇಲ್ಲಿದೆ ಓದಿ
‘ಮೀಸಲಾತಿ’ ಕೊಡುವುದಕ್ಕೂ ಗಂಡೆದೆ ಬೇಕು, ಅದು ಸಿಎಂ ಬೊಮ್ಮಾಯಿಗಿದೆ : ಸಚಿವ R. ಅಶೋಕ್
ಸಚಿವ ವಿ.ಸೋಮಣ್ಣ ತಕ್ಷಣ ರಾಜೀನಾಮೆ ನೀಡಬೇಕು – ಎಎಪಿ ಸುರೇಶ್ ರಾಥೋಢ್ ಆಗ್ರಹ