ರಾಮನಗರ: ಜಿಲ್ಲೆಯಲ್ಲಿ ಚನ್ನಪಟ್ಟದಲ್ಲಿ ಸಿ.ಪಿ ಯೋಗೇಶ್ವರ್ ಕಿಡಿಕಾರಿದ್ದಾರೆ. ಸರ್ಕಾರ ಉರುಳಿಸಲು ಯಾರೋ ನಾಲ್ಕು ಜನರಿಂದ ಸಾಧ್ಯನಾ? ಸರ್ಕಾರ ಏನು ಕಡ್ಡಿ ಮೇಲೆ ನಿಂತಿದೆಯಾ ಎಂದು ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಚನ್ನಪಟ್ಟದಲ್ಲಿ ಮಾತನಾಡಿ ಅವರು, ಅವರ ವೈಫಲ್ಯದಿಂದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿತ್ತು. ಅವರು ಮೋಜು ಮಸ್ತಿ ಮಾಡುತ್ತಿದ್ದರಿಂದ ಸರ್ಕಾರ ಪತನವಾಗಿತ್ತು. ಆದರೆ ಇಂದು ನನ್ನ ಮೇಲೆ ಬೊಟ್ಟು ಮಾಡುವುದರಲ್ಲಿ ಏನು ಸಿಗುವುದಿಲ್ಲ. ಸಮ್ಮಿಶ್ರ ಸರ್ಕಾರ ಯಾಕೆ ಉರುಳಿತು ಎಂದು ಎಲ್ಲರಿಗೂ ಗೊತ್ತಿದೆ ಸಿ.ಪಿ.ಯೋಗೇಶ್ವರ್ ಟೀಕಿಸಿದ್ದಾರೆ.
ಇನ್ನು ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಆವಯ್ಯ ಮೂಡ್ ಬಂದಂಗೆ ಮನಸ್ಸಿಗೆ ಬಂದಂಗೆ ಮಾತಾಡ್ತಾರೆ. ಒಂದು ಸಲ ಹೇಳಿದ್ರು ಮಳೆ ಆಗಲು ನಾನೇ ಕಾರಣ ಅಂದರು. ಮಳೆ ಅನಾಹುತಕ್ಕೂ ಅವರೇ ಕಾರಣವಾಗಬೇಕು ಅಲ್ಲವೇ. ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಅಷ್ಟು ಗೌರವವಿಲ್ಲ. ಹೆಚ್ಡಿಕೆ ಆರೋಪಗಳಿಗೆ ಉತ್ತರ ಕೊಡುವುದು ಸಮಂಜಸವಲ್ಲ ಎಂದರು.
ಮಾಧ್ಯಮದಲ್ಲಿ ಪ್ರಚಾರಕ್ಕಾಗಿ ಕೆಲಸ ಮಾಡುವುದಿಲ್ಲ. ಕುಮಾರಸ್ವಾಮಿ ಇಡೀ ತಾಲೂಕಿನಲ್ಲಿ ಒಬ್ಬನೇ ಕಂಟ್ರಾಕ್ಟರ್ ಇಟ್ಟುಕೊಂಡು ದಲ್ಲಾಳಿ ವ್ಯಾಪಾರ ಮಾಡುತ್ತಿದ್ದಾರೆ. ನಾನು ಅವರ ಬಗ್ಗೆ ಕೇವಲವಾಗಿ ಮಾತನಾಡಿ ಚಿಕ್ಕವನಾಗಲು ಹೋಗುವುದಿಲ್ಲ. 2023 ರಲ್ಲಿ ಜನ ತೀರ್ಮಾನ ಮಾಡುತ್ತಾರೆ. ಕುಮಾರಸ್ವಾಮಿ ಸರಿನಾ, ಯೋಗೇಶ್ವರ್ ಸರಿನಾ ಅಂತಾ ನನ್ನ ಬಗ್ಗೆ ಇನ್ನೇನೋ ಆರೋಪ ಮಾಡಲು ತಾಲ್ಲೂಕಿನಲ್ಲಿ ಜನ ಕುಮಾರಸ್ವಾಮಿ ಅವರ ಕೈ ಬಿಟ್ಟಿದ್ದಾರೆ. ನಾಲ್ಕು ಜನ ಕಂಟ್ರಾಕ್ಟರ್ ಬಿಟ್ಟರೇ ಜೆಡಿಎಸ್ ನಲ್ಲಿ ನಂಬಲು ಯಾರು ಇಲ್ಲ. ಜನರಿಗೆ ಅರಿವು ಆಗಿದೆ. ಕುಮಾರಸ್ವಾಮಿ ಅವಕಾಶವಾದಿ ಎಂದು ಜನರಿಗೆ ಮನವರಿಕೆ ಆಗಿದೆ ಎಂದರು.