ಬೆಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯಾಧ್ಯಂತ ಮತ್ತೆ ಕೊರೋನಾ ಪ್ರಕರಣಗಳ ( Coronavirus ) ಸಂಖ್ಯೆ ಮುಂದುವರೆದಿದೆ. ಇಂದು 989 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ದೃಢಪಟ್ಟಿದೆ.

BIGG NEWS: ಪದವಿ, ಸ್ನಾತಕೋತ್ತರ ಕೋರ್ಸ್: ಇಡೀ ರಾಜ್ಯಕ್ಕೆ ಏಕರೂಪದ ಶೈಕ್ಷಣಿಕ ವೇಳಾಪಟ್ಟಿ – ಸಚಿವ ಅಶ್ವತ್ಥನಾರಾಯಣ

ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬಳ್ಳಾರಿ 04, ಬೆಳಗಾವಿ 03, ಬೆಂಗಳೂರು ಗ್ರಾಮಾಂತರ 14, ಬೆಂಗಳೂರು ನಗರ 927, ಚಿತ್ರದುರ್ಗ 01, ದಕ್ಷಿಣ ಕನ್ನಡ 21 ಮಂದಿಗೆ ಕೋವಿಡ್ ದೃಢಪಟ್ಟಿದೆ.

‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್’ ಪುನರಾರಂಭ | Humsafar Weekly Express

ಧಾರವಾಡ 08, ಹಾಸನ 03, ಮಂಡ್ಯ ಮತ್ತು ಉತ್ತರ ಕನ್ನಡ 01 ಹಾಗೂ ಶಿವಮೊಗ್ಗ 06 ಸೇರಿದಂತೆ 989 ಮಂದಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಹೀಗಾಗಿ ಸೋಂಕಿತರ ಸಂಖ್ಯೆ 39,78,079ಕ್ಕೆ ಏರಿಕೆಯಾಗಿದೆ. ಇವರಲ್ಲಿ ಇಂದು 802 ಸೇರಿದಂತೆ 39,31,263 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ಈಗ ರಾಜ್ಯದಲ್ಲಿ 6,693 ಸಕ್ರೀಯ ಸೋಂಕಿತರು ಇರೋದಾಗಿ ತಿಳಿಸಿದೆ.

‘ಅಮರನಾಥ ಯಾತ್ರೆ’ಗೆ ತೆರಳಿದ್ದ ‘ಬಬಲಾದ ಶ್ರೀಗಳು’ ಸೇರಿ 14 ಮಂದಿ ಸುರಕ್ಷಿತ

Share.
Exit mobile version