ಕಲಬುರ್ಗಿ: ಕರ್ನಾಟಕದಿಂದ ಅಮರನಾಥ ಯಾತ್ರೆಗೆ ತೆರಳಿದ್ದಂತ ಬಬಲಾದ ಶ್ರೀಗಳು ಸೇರಿದಂತೆ 14 ಮಂದಿ ಭಕ್ತರು ಮೇಘಸ್ಪೋಟದ ನಂತ್ರ ಸುರಕ್ಷಿತವಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಅಮರನಾಥದಲ್ಲಿ ನಿನ್ನೆ ಮೇಘಸ್ಪೋಟದ ನಂತ್ರ ಬಹುದೊಡ್ಡ ಸಂಕಷ್ಟವೇ ಉಂಟಾಗಿತ್ತು. ಈ ವೇಳೆ ಕಲಬುರ್ಗಿಯ ಬಬಲಾದ ಶ್ರೀಗಳು ಸೇರಿ 14 ಮಂದಿ ಹಾಗೂ ಗಾಣಗಾಪುರದ 11 ಭಕ್ತರು ಸೇರಿದಂತೆ ಕರ್ನಾಟಕದ 55 ಮಂದಿಯನ್ನು ರಕ್ಷಿಸಲಾಗಿದೆ.

BREAKING NEWS: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರನಿಲ್ ವಿಕ್ರಮಸಿಂಘೆ ರಾಜೀನಾಮೆ | Ranil Wickremesinghe resigns

ಅಂದಹಾಗೇ, ಜುಲೈ.3ರಂದು ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ 11 ಮಂದಿ ಅಮರನಾಥ ಯಾತ್ರೆಗೆ ತೆರಳಿದ್ದರು. ನಿನ್ನೆ ಸಂಜೆ ಅಮರನಾಥದಲ್ಲಿ ಶಿವಲಿಂಗನ ದರ್ಶನ ಪಡೆದು, ನಿನ್ನೆ ಭಾರೀ ಮಳೆಯಿಂದಾಗಿ ಸುರಕ್ಷಿತ ಸ್ಥಳದಲ್ಲಿ ನೆಲೆನಿಂತಿದ್ದರು.

ಮತ್ತೊಂದೆಡೆ ಬಬಲಾದದ ಶ್ರೀ ಗುರುಪಾದಲಿಂಗ ಮಹಾ ಶಿವಯೋಗಿಗಳು ತಮ್ಮ 14 ಜನರ ಭಕ್ತರ ತಂಡದೊಂದಿಗೆ ಕಳೆದ ಸೋಮವಾರ ಅಮರನಾಥ ಯಾತ್ರೆಗೆ ತೆರಳಿದ್ದರು. ನಿನ್ನೆ ಮೇಘಸ್ಪೋಟದ ನಂತ್ರ ಉಂಟಾದಂತ ಸಂಕಷ್ಟದ ನಡುವೆ ಸುರಕ್ಷಿತವಾಗಿದ್ದು, ವೈಷ್ಣವಿ ದೇವಿಯ ಪ್ರವಾಸಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ‘ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್’ ಪುನರಾರಂಭ | Humsafar Weekly Express

Share.
Exit mobile version