ಬೆಂಗಳೂರು: ಉದಯಪುರ ಸಿಟಿ, ಮೈಸೂರು, ಉದಯಪುರ ಸಿಟಿ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ( Humsafar Weekly Express )ಇದೀಗ ವಾಯುವ್ಯ ರೈಲ್ವೆ ವಲಯವು ( North Western Railway Zone ) ಪುನರಾರಂಭಿಸಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

ಈ ಬಗ್ಗೆ ನೈರುತ್ಯ ರೈಲ್ವೆ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 11.07.2022 ರಿಂದ ಉದಯಪುರ ಸಿಟಿ ಹಾಗೂ ದಿನಾಂಕ 14.07.2022 ರಿಂದ ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 19667/19668 ಉದಯಪುರ ಸಿಟಿ – ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲುಗಳ ಸೇವೆಯನ್ನು ವಾಯುವ್ಯ ರೈಲ್ವೆ ವಲಯವು ಪುನರಾರಂಭಿಸಿದೆ. ಈ ರೈಲುಗಳು ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತದೆ ಎಂದು ತಿಳಿಸಿದೆ.

BREAKING: ಮಂಡ್ಯದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡಿದ್ದ ಪುಟ್ಬಾಲ್ ಆಟಗಾರ ಎಂ.ಎನ್ ವಿಶ್ವಾಸ್ ನಿಧನ

1. ಉದಯಪುರ ಸಿಟಿ – ಮೈಸೂರು ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19667) ಜುಲೈ 11 ರಿಂದ ಪ್ರತಿ ಸೋಮವಾರದಂದು ರಾತ್ರಿ 09:15 ಕ್ಕೆ ಉದಯಪುರ ಸಿಟಿ ನಿಲ್ದಾಣದಿಂದ ಹೊರಟು, ಪ್ರತಿ ಬುಧವಾರದಂದು ಸಂಜೆ 04.35 ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

2. ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19668) ಜುಲೈ 14 ರಿಂದ ಪ್ರತಿ ಗುರುವಾರರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು, ಪ್ರತಿ ಶನಿವಾರದಂದು ನಸುಕಿನಜಾವ 03:35 ಕ್ಕೆ ಉದಯಪುರ ಸಿಟಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು (19667) ಮಾರ್ಗ ಮಧ್ಯದಲ್ಲಿ ಚಿತ್ತೌಡಗಢ (11:05/11:15 PM), ಮಂದಸೌರ್ (01:10/01:12 AM), ರತ್ಲಾಮ್ (03:10/03:20 AM), ವಡೋದರಾ (07:35/07:45 AM), ಸೂರತ್ (09:37/09:42 AM), ವಸಯಿ ರೋಡ (12:25/12:30 PM), ಪುಣೆ (04:35/04:40 PM), ಮೀರಜ್ (11:40/11:45 PM), ಬೆಳಗಾವಿ (01:58/02:00 AM), ಎಸ್.ಎಸ್.ಎಸ್ ಹುಬ್ಬಳ್ಳಿ (04:55/05:05 AM), ದಾವಣಗೆರೆ (07:28/07:30 AM), ಕೆ.ಎಸ್.ಆರ್ ಬೆಂಗಳೂರು (01:30/01:35 PM) ಮತ್ತು ಮಂಡ್ಯ (03:00/03:02 PM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

BREAKING: ಮಂಡ್ಯದಲ್ಲಿ ವಿದ್ಯುತ್ ಸ್ಪರ್ಷದಿಂದ ಗಾಯಗೊಂಡಿದ್ದ ಪುಟ್ಬಾಲ್ ಆಟಗಾರ ಎಂ.ಎನ್ ವಿಶ್ವಾಸ್ ನಿಧನ

ಹಿಂತಿರಿಗುವ ದಿಕ್ಕಿನಲ್ಲಿ, ಈ ರೈಲು (19668) ಮಾರ್ಗ ಮಧ್ಯದಲ್ಲಿ ಮಂಡ್ಯ (10:34/10:35 AM), ಕೆ.ಎಸ್.ಆರ್ ಬೆಂಗಳೂರು (12:10/12:20 PM), ದಾವಣಗೆರೆ (04:40/04:42 PM), ಎಸ್.ಎಸ್.ಎಸ್ ಹುಬ್ಬಳ್ಳಿ (08:00/08:10 PM), ಬೆಳಗಾವಿ (10:50/10:52 PM), ಮೀರಜ್ (02:30/02:35 AM), ಪುಣೆ (08:25/08:30 AM), ವಸಯಿ ರೋಡ (12:35/12:45 PM), ಸೂರತ್ (03:22/03:27 PM), ವಡೋದರಾ (05:05/05:15 PM), ರತ್ಲಾಮ್ (08:45/08:55 PM), ಮಂದಸೌರ್ (10:25/10:27 PM) ಮತ್ತು ಚಿತ್ತೌಡಗಢ (01:10/01:20 AM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಈ ಎರಡು ರೈಲುಗಳು, ಹದಿನಾರು- 3ನೇ ದರ್ಜೆಯ ಹವಾ ನಿಯಂತ್ರಿತ ಬೋಗಿಗಳು, ಒಂದು- ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿ, ಒಂದು- ಹವಾ ನಿಯಂತ್ರಿತ ಅಡುಗೆ ಬೋಗಿ (ಪ್ಯಾಂಟ್ರಿ ಕಾರ್) ಹಾಗೂ ಎರಡು-ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್/ ಜನರೇಟರ್ ಗಳು ಸೇರಿ ಒಟ್ಟು ಇಪ್ಪತ್ತು ಬೋಗಿಗಳನ್ನು ಒಳಗೊಂಡಿರುತ್ತದೆ ಎಂದಿದೆ.

ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲುಗಳಲ್ಲಿ ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

Share.
Exit mobile version