ಹುಬ್ಬಳ್ಳಿ : ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಅಂಜಲಿ ಅಂಬಿಗೇರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಐಡಿ ಅಧಿಕಾರಿಗಳು ಹಂತಕ ವಿಶ್ವನನ್ನು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್, 8 ದಿನ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ.
ಅಂಜಲಿಯನ್ನ ಹತ್ಯೆ ಮಾಡಿದ ಬಳಿಕ ಆರೋಪಿ ವಿಶ್ವ, ದಾವಣಗೆರೆಗೆ ತೆರಳಿದ್ದ.ಅಲ್ಲಿಂದ್ದ ಮತ್ತೆ ವಾಪಸ್ ಬರುವಾಗ ರೈಲಿನಿಂದ ಬಿದ್ದು ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಸಿಐಡಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಆತನ ಹೇಳಿಕೆಯನ್ನು ಪಡೆದುಕೊಂಡು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಸಿಐಡಿ ಆರೋಪಿ ಗಿರೀಶನನ್ನು ಕೋರ್ಟಿಗೆ ಹಾಜರುಪಡಿಸಿದೆ. ಒಂದನೇ ಹೆಚ್ಚುರಿ ಸಿವಿಲ್ ನ್ಯಾಯಾಲಯದಲ್ಲಿ ಆರೋಪಿ ಗಿರೀಶ್ ಸಾವಂತನ ವಿಚಾರಣೆ ನಡೆಸಿತು. ಆರೋಪಿಯನ್ನು ಮತ್ತೆ ಕಸ್ಟಡಿಗೆ ನೀಡುವಂತೆ ಸಿಐಡಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಆರೋಪಿ ಗಿರೀಶ್ ಕಣ್ಣೀರು ಹಾಕಿದ ಘಟನೆ ನಡೆಯಿತು. ಈ ವೇಳೆ ಜಡ್ಜ್ ಹತ್ಯೆ ಮಾಡುವಾಗ ಗೊತ್ತಾಗಲಿಲ್ವಾ ಎಂದು ಗಿರೀಶ್ಗೆ ಗದರಿದ್ದಾರೆ.
ಅಂತಿಮವಾಗಿ ಈ ಪ್ರಕರಣದ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿ ನಾಗೇಶ್ ನಾಯಕ್ ಅವರು, ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣದ ಆರೋಪಿ ಗಿರೀಶ್ ಗೆ 8 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ.
ರಾಜ್ಯದ ರೈತರಿಗೆ ‘ನೆಮ್ಮದಿ ಸುದ್ದಿ’ ; ಬರ ಪರಿಹಾರದ ಮೊತ್ತ ಸಾಲಕ್ಕೆ ವಜಾ ಮಾಡಿಕೊಳ್ಳದಂತೆ ಸಿಎಂ ಸೂಚನೆ