ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಪಿಎಫ್ಐ ಕಚೇರಿಗಳ ಮೇಲೆ ನಡೆಯುತ್ತಿರುವ ಎನ್ಐ ಎ ದಾಳಿ ಖಂಡಿಸಿ ದೇಶದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಇಂದು ಕೇರಳದಲ್ಲಿ ಕೂಡ ಬಂದ್ ಗೆ ಕರೆ ನೀಡಲಾಗಿದೆ.
ಇದೀಗ ಖಡಕ್ ಸೂಚನೆ ಹೊರಡಿಸಿರುವ ಕೇರಳ ಹೈಕೋರ್ಟ್ ‘ ಯಾರೂ ಅನುಮತಿಯಿಲ್ಲದೇ ರಾಜ್ಯದಲ್ಲಿ ಬಂದ್ ಗೆ ಕರೆ ನೀಡುವ ಹಾಗಿಲ್ಲ ಎಂದು ಪಿಎಫ್ಐಗೆ ಕೇರಳ ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ಬಂದ್ ಗೆ ಕರೆ ನೀಡಿರುವ ಪಿಎಫ್ಐ ವರ್ತನೆ ಬಗ್ಗೆ ಕೇರಳ ಹೈಕೋರ್ಟ್ ಗರಂ ಆಗಿದ್ದು, ಶುಕ್ರವಾರ ಇಂದು ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಯಾರೂ ಅನುಮತಿಯಿಲ್ಲದೇ ರಾಜ್ಯದಲ್ಲಿ ಬಂದ್ ಗೆ ಕರೆ ನೀಡುವ ಹಾಗಿಲ್ಲ ಎಂದು ಕೋರ್ಟ್ ಸೂಚನೆ ನೀಡಿದೆ. ಪಿಎಫ್ಐ ಕಚೇರಿಗಳ ಮೇಲೆ ನಡೆಯುತ್ತಿರುವ ಎನ್ಐ ಎ ದಾಳಿ ಖಂಡಿಸಿ ದೇಶದ ಹಲವು ಕಡೆ ಬಂದ್ ನಡೆಸಲಾಗುತ್ತಿದ್ದು, ಪೊಲೀಸರು ಸರ್ಪಗಾವಲು ಹಾಕಿದ್ದಾರೆ.
BIG NEWS: ಗುರುಗ್ರಾಮ್ನಲ್ಲಿ ಭಾರೀ ಮಳೆ, ರಸ್ತೆಗಳು ಜಲಾವೃತ: ʻವರ್ಕ್ ಫ್ರಂ ಹೋಮ್ʼ ಮಾಡುವಂತೆ ಅಧಿಕಾರಿಗಳಿಂದ ಸಲಹೆ
Breaking News : ಉಡುಪಿಯಲ್ಲಿ ಬಂದ್ ನಡೆಸಿದ 11 ಮಂದಿ ‘PFI’ ಕಾರ್ಯಕರ್ತರ ವಿರುದ್ಧ ‘FIR’ ದಾಖಲು