ಬೆಂಗಳೂರು: ಬಿಎಂಟಿಸಿ ವಿಭಾಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದರೆ ಈ ಹಿನ್ನೆಲೆಯಲ್ಲಿ ಹತ್ತು ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
BIGG NEWS: ಕೋಲಾರದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ; ಧರೆಗುರುಳಿದ ವಿದ್ಯುತ್ ಕಂಬ
ಹೀಗಾಗಿ ಇಬ್ಬರನ್ನು ವರ್ಗಾವಣೆ ಮಾಡಿ ಎಂದು ಆದೇಶಿಸಲಾಗಿದೆ. ಫೋನ್ಪೇ, ಗೂಗಲ್ ಪೇ ಮೂಲಕ ಲಂಚ ಪಡೆದ ಪ್ರಕರಣ ಸಂಬಂಧ ಬಿಎಂಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಚಂದ್ರಶೇಖರ್ ಹಾಗೂ ಜಗದೀಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
BIGG NEWS: ಕೋಲಾರದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ; ಧರೆಗುರುಳಿದ ವಿದ್ಯುತ್ ಕಂಬ
ಜಗದೀಶ್ ಅವರನ್ನು ಕೆಎಸ್ಆರ್ಟಿಸಿ ರಾಮನಗರ ವಿಭಾಗಕ್ಕೆ ವರ್ಗಾವಣೆ ಮಾಡಿದರೆ, ಚಂದ್ರಶೇಖರ್ ಅವರನ್ನು ಕೆಕೆಆರ್ಟಿಸಿ ಕಲಬುರಗಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.ಲಂಚ ಪಡೆದು ಬಸ್ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಡ್ಯೂಟಿ ನೀಡಿದ ಆರೋಪ ಬಿಎಂಟಿಸಿಯ 94 ಅಧಿಕಾರಿಗಳು ವಿರುದ್ಧ ಕೇಳಿಬಂದಿತ್ತು. ಬಿಎಂಟಿಸಿಯಲ್ಲಿ ಡ್ಯೂಟಿ ಬೇಕೆಂದರೆ ಚಾಲಕರು, ನಿರ್ವಾಹಕರು ಲಂಚ ನೀಡಬೇಕಾಗಿತ್ತು.